HomeLatest Newsವಸತಿ ಸೌಲಭ್ಯಕ್ಕೆ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ

ವಸತಿ ಸೌಲಭ್ಯಕ್ಕೆ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ

ರಾಯಚೂರು : ನಿವೇಶನ ಹೊಂದಿರುವ ವಸತಿ ರಹಿತ ಮಾಜಿ ದೇವದಾಸಿ ಮಹಿಳೆಯರಿಗೆ ಗ್ರಾಮೀಣ ಮತ್ತು ನಗರ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.

ನಿವೇಶನ ಹೊಂದಿರುವ ವಸತಿ ರಹಿತ ಮಾಜಿ ದೇವದಾಸಿ ಮಹಿಳೆಯರಿಗೆ ಗ್ರಾಮೀಣ ಫಲಾನುಭವಿಗಳಿಗೆ 262 ಮತ್ತು ನಗರ ಫಲಾನುಭವಿಗಳಿಗೆ 140 ವಸತಿ ಸೌಲಭ್ಯ ಕಲ್ಪಿಸಲು ಅನುದಾನವನ್ನು ರಾಜೀವ್ ಗಾಂಧಿ ವಸತಿ ನಿಗಮರವರಿಗೆ ಆಡಳಿತ್ಮಾತಕ ಅನುಮೋದನೆಯನ್ನು ನೀಡಿರುತ್ತಾರೆ. ಜಿಲ್ಲೆಯ ಮಾಜಿ ದೇವದಾಸಿ ಮಹಿಳೆಯರು ನಿವೇಶನ ಹೋದಿರುವ ವಸತಿ ರಹಿತ ಫಲಾನುಭವಿಗಳು ದೇವದಾಸಿ ಪುನರ್ವಸತಿ ಯೋಜನೆ ಜಿಲ್ಲಾ ಕಚೇರಿ ರಾಯಚೂರು, #1-5-166 ಸ್ಟಾರ್ ಫಂಕ್ಷನ್ ಹಾಲ್ ಎದುರುಗಡೆ, ಬಾಲಾಜಿ ಕಾಂಪ್ಲೆಕ್ಸ್ ಹತ್ತಿರ, ಗೋಡ ಶೇಡ್ ಏರಿಯಾ ರಾಯಚೂರು-584101, ದಿನಾಂಕ:01-02-2026 ರಿಂದ 28-02-2026ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕ ಯೋಜನಾಷ್ಠಾನಧಿಕಾರಿಗಳು ಮಾನ್ವಿ, ಸಿರವಾರ, ರಾಯಚೂರು ಮೊಬೈಲ್ ಸಂಖ್ಯೆ: 7406034925, ದೇವದುರ್ಗ: 9980879540 ಲಿಂಗಸೂಗೂರು, ಮಸ್ಕಿ ಹಾಗೂ ಸಿಂಧನೂರು: 8861454090ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆ ತರಬೇತಿ

ರಾಯಚೂರು : ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಯಚೂರಿನ ಉಪ ನೋಂದಣೆ ಕಚೇರಿಯಲ್ಲಿ ಪೇಪರ್ಲೆಸ್ ರಿಜಿಸ್ಟ್ರೇಷನ್ ವ್ಯವಸ್ಥೆಯ ಕುರಿತು ತರಬೇತಿಯನ್ನು ಜನವರಿ 31ರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ತರಬೇತಿಯ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

ಸಂಬಂಧಪಟ್ಟ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ರಾಯಚೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರ ವರ್ಗದವರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular