HomeJobsJOB ALERT : ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್ : 'SBI' ನಲ್ಲಿ 2273 ಹುದ್ದೆಗಳಿಗೆ ಅರ್ಜಿ...

JOB ALERT : ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್ : ‘SBI’ ನಲ್ಲಿ 2273 ಹುದ್ದೆಗಳಿಗೆ ಅರ್ಜಿ ಆಹ್ವಾನ |SBI Recruitment 2026

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,273 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.   ಕರ್ನಾಟಕದಲ್ಲಿ 211 ಹುದ್ದೆಗಳು ಲಭ್ಯವಿದ್ದು,  ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಇರುವ ತನ್ನ ವಿವಿಧ ಸರ್ಕಲ್‌ಗಳಲ್ಲಿ ಖಾಲಿ ಇರುವ ಒಟ್ಟು 2,273 ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಹುದ್ದೆಯ ವಿವರಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಹುದ್ದೆಯ ಹೆಸರು: ಸರ್ಕಲ್ ಬೇಸ್ಡ್ ಆಫೀಸರ್ (Circle Based Officer – CBO)
  • ಒಟ್ಟು ಹುದ್ದೆಗಳು: 2,273
    • ನಿಯಮಿತ ಹುದ್ದೆಗಳು (Regular): 2,050
    • ಬ್ಯಾಕ್‌ಲಾಗ್ ಹುದ್ದೆಗಳು (Backlog): 223
  • ಕರ್ನಾಟಕದಲ್ಲಿರುವ ಹುದ್ದೆಗಳು: ಬೆಂಗಳೂರು ಸರ್ಕಲ್‌ನಲ್ಲಿ ಒಟ್ಟು 211 ಹುದ್ದೆಗಳು ಲಭ್ಯವಿವೆ (ಕನ್ನಡ ಭಾಷೆಯ ಜ್ಞಾನ ಕಡ್ಡಾಯ).

2. ಶೈಕ್ಷಣಿಕ ಅರ್ಹತೆ:

  • ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು.
  • ಯಾವುದೇ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕನಿಷ್ಠ 2 ವರ್ಷಗಳ ಕಾಲ ಆಫೀಸರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

3. ವಯೋಮಿತಿ (31-12-2025ಕ್ಕೆ ಅನ್ವಯಿಸುವಂತೆ):

  • ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

4. ಅರ್ಜಿ ಶುಲ್ಕ:

  • ಸಾಮಾನ್ಯ (General) / OBC / EWS ಅಭ್ಯರ್ಥಿಗಳಿಗೆ: ₹750
  • SC / ST / PwBD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ.

5. ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29 ಜನವರಿ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಫೆಬ್ರವರಿ 2026
  • ಪರೀಕ್ಷೆ ನಡೆಯುವ ಅಂದಾಜು ಸಮಯ: ಮಾರ್ಚ್ 2026

6. ಆಯ್ಕೆ ಪ್ರಕ್ರಿಯೆ:

  • ಆನ್‌ಲೈನ್ ಲಿಖಿತ ಪರೀಕ್ಷೆ (Objective & Descriptive)
  • ಸ್ಕ್ರೀನಿಂಗ್ (ದಾಖಲೆಗಳ ಪರಿಶೀಲನೆ)
  • ಸಂದರ್ಶನ (Interview)
  • ಸ್ಥಳೀಯ ಭಾಷಾ ಪರೀಕ್ಷೆ (ಯಾರು 10 ಅಥವಾ 12ನೇ ತರಗತಿಯಲ್ಲಿ ಸ್ಥಳೀಯ ಭಾಷೆ ಓದಿಲ್ಲವೋ ಅವರಿಗೆ ಮಾತ್ರ).

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in/careers ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular