HomeLatest NewsBREAKING: ಸರ್ಕಾರಿ ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥ

BREAKING: ಸರ್ಕಾರಿ ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥ

ಶಿವಮೊಗ್ಗ: ಸರ್ಕಾರಿ ಶಾಲೆಯಲ್ಲಿ ಖನಿಜಾಂಶದ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಶಾಲೆಯಲ್ಲಿ ನಡೆದಿದೆ.

ಅರಳಿಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅನಿಮಿಯಾ ತಡೆಗಟ್ಟಲು ಶಾಲೆಯಲ್ಲಿ ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳಿಗೆ ಖನಿಜಾಂಶದ ಮಾತ್ರೆ ನೀಡಲಾಗುತ್ತದೆ. ಅದರಂತೆ ಇಂದು ಕೂಡ ಮಾತ್ರೆ ಕೊಡಲಾಗಿತ್ತು. ಮಧ್ಯಾಹ್ನ ಊಟದ ಬಳಿಕ ವಿದ್ಯಾರ್ಥಿಗಳಿಗೆ ಖನಿಜಾಂಶದ ಮಾತ್ರೆ ಕೊಡಲಾಗಿತ್ತು. ಮಾತ್ರೆ ಸೇವಿಸ ಕೆಲ ಸಮಯದಲ್ಲೇ ಇಬ್ಬರು ಮಕ್ಕಳು ಹೊಟ್ಟೆ ನೋವು ಎಂದು ಹೇಳಿದ್ದರು.

ಬಳಿಕ 59 ವಿದ್ಯಾರ್ಥಿಗಳು ಒಮ್ಮೆಲೆ ಹೊಟ್ಟೆನೋವೆಂದು ಒದ್ದಾಡಲಾರಂಭಿಸಿದ್ದಾರೆ. ಖನಿಜಾಂಶದ ಮಾತ್ರೆ ಸೇವಿಸಿದ ಒಂದು ಗಂಟೆಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಕ್ಷನ್ ಆಗಿದೆ. ಈ ಶಾಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವ ಡಿಹೆಚ್ ಒ ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಶಾಲೆ ಹಾಗೂ ಆಸ್ಪತ್ರೆಗಳಿಗೆ ಬಿಇಒ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular