ಮ್ಯೂಚುವಲ್ ಫಂಡ್ ಎಂದರೆ ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ಶೇರು ಮಾರುಕಟ್ಟೆ, ಬಾಂಡ್ಗಳು ಅಥವಾ ಇತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುವ ಒಂದು ವ್ಯವಸ್ಥೆ. ಇದನ್ನು ವೃತ್ತಿಪರ ಫಂಡ್ ಮ್ಯಾನೇಜರ್ಗಳು ನಿರ್ವಹಿಸುತ್ತಾರೆ. ಹೂಡಿಕೆಯಿಂದ ಬರುವ ಲಾಭ ಅಥವಾ ನಷ್ಟವನ್ನು ಹೂಡಿಕೆದಾರರ ಪಾಲಿಗೆ ಅನುಗುಣವಾಗಿ ಹಂಚಲಾಗುತ್ತದೆ. ನಿಮ್ಮ ಹಣವನ್ನು ಒಂದೇ ಕಂಪನಿಯಲ್ಲಿ ಹಾಕುವ ಬದಲು ಅನೇಕ ಕಂಪನಿಗಳಲ್ಲಿ ಹಂಚುವುದರಿಂದ ರಿಸ್ಕ್ ಕಡಿಮೆಯಾಗುತ್ತದೆ.
ದೀರ್ಘಕಾಲದ ಹೂಡಿಕೆಯಲ್ಲಿ ಮ್ಯೂಚುವಲ್ ಫಂಡ್ಗಳು ಉತ್ತಮ ಆದಾಯವನ್ನು ನೀಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಪ್ರಮುಖ ಕಾರಣ ‘ಕಾಂಪೌಂಡಿಂಗ್ ಇಂಟರೆಸ್ಟ್’ (ಚಕ್ರಬಡ್ಡಿ) ಲಾಭ. ಸ್ಟಾಕ್ ಮಾರ್ಕೆಟ್ನಲ್ಲಿ IPOಗಳಿಗೆ ಇರುವಂತೆಯೇ, ಮ್ಯೂಚುವಲ್ ಫಂಡ್ ಲೋಕದಲ್ಲಿ NFO (New Fund Offer) ಗಳಿಗೆ ಅಪಾರ ಬೇಡಿಕೆಯಿದೆ. ಇಂದು, ಅಂದರೆ ಜನವರಿ 27 (ಮಂಗಳವಾರ) ರಂದು ಒಟ್ಟು 6 ಮ್ಯೂಚುವಲ್ ಫಂಡ್ NFOಗಳು ಬಿಡುಗಡೆಯಾಗುತ್ತಿವೆ. ಅವುಗಳ ವಿವರ ಇಲ್ಲಿದೆ:
NFO ಎಂದರೇನು?
ಯಾವುದೇ ಕಂಪನಿಯು ಮೊದಲ ಬಾರಿಗೆ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದನ್ನು IPO ಎನ್ನುತ್ತಾರೆ. ಅದೇ ರೀತಿ, ಮ್ಯೂಚುವಲ್ ಫಂಡ್ ಸಂಸ್ಥೆಯು ಹೊಸ ಯೋಜನೆಯನ್ನು ಆರಂಭಿಸಿದಾಗ ಅದನ್ನು NFO ಎನ್ನಲಾಗುತ್ತದೆ. ಇಲ್ಲಿ ಹೂಡಿಕೆದಾರರು ಆರಂಭಿಕ ಹಂತದಲ್ಲಿ ಕಡಿಮೆ ಬೆಲೆಗೆ (ಸಾಮಾನ್ಯವಾಗಿ ₹10) ಫಂಡ್ ಯುನಿಟ್ಗಳನ್ನು ಖರೀದಿಸಬಹುದು.
6 ಹೊಸ ಫಂಡ್ಗಳು:
- ಜಿಯೋ ಬ್ಲ್ಯಾಕ್ರಾಕ್ ಸೌತ್ ರೊಟೇಷನ್ ಫಂಡ್ (JioBlackRock Sector Rotation Fund):
- ಕೊನೆಯ ದಿನಾಂಕ: ಫೆಬ್ರವರಿ 9, 2026.
- ಕನಿಷ್ಠ ಹೂಡಿಕೆ: ₹500.
- ಮಿರೆ ಅಸೆಟ್ ನಿಫ್ಟಿ ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಮತ್ತು ಲಾಜಿಸ್ಟಿಕ್ಸ್ ETF:
- ಕೊನೆಯ ದಿನಾಂಕ: ಫೆಬ್ರವರಿ 9, 2026.
- ಕನಿಷ್ಠ ಹೂಡಿಕೆ: ₹5,000.
- ಮಿರೆ ಅಸೆಟ್ ನಿಫ್ಟಿ 500 ಹೆಲ್ತ್ಕೇರ್ ETF:
- ಕೊನೆಯ ದಿನಾಂಕ: ಫೆಬ್ರವರಿ 6, 2026.
- ಕನಿಷ್ಠ ಹೂಡಿಕೆ: ₹5,000.
- ಎಡೆಲ್ವೀಸ್ ಫೈನಾನ್ಷಿಯಲ್ ಸರ್ವಿಸಸ್ ಫಂಡ್:
- ಕೊನೆಯ ದಿನಾಂಕ: ಫೆಬ್ರವರಿ 10, 2026.
- ಕನಿಷ್ಠ ಹೂಡಿಕೆ: ₹100. (ಇದು ಅತಿ ಕಡಿಮೆ ಮೊತ್ತದ ಹೂಡಿಕೆಯಾಗಿದೆ).
- ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಫಂಡ್:
- ಕೊನೆಯ ದಿನಾಂಕ: ಫೆಬ್ರವರಿ 10, 2026.
- ಕನಿಷ್ಠ ಹೂಡಿಕೆ: ₹500.
- ದಿ ವೆಲ್ತ್ ಕಂಪನಿ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್:
- ಕೊನೆಯ ದಿನಾಂಕ: ಫೆಬ್ರವರಿ 10, 2026.
- ಕನಿಷ್ಠ ಹೂಡಿಕೆ: ₹5,000.
ಹೂಡಿಕೆದಾರರಿಗೆ ಕಿವಿಮಾತು:
ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಆರ್ಥಿಕ ಗುರಿಗಳು, ಹೂಡಿಕೆ ಸಾಮರ್ಥ್ಯ ಮತ್ತು ರಿಸ್ಕ್ ತೆಗೆದುಕೊಳ್ಳುವ ಶಕ್ತಿಯನ್ನು ಗಮನದಲ್ಲಿಟ್ಟುಕೊಳ್ಳಿ. ಆರ್ಥಿಕ ತಜ್ಞರ ಸಲಹೆ ಪಡೆದು ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ.

