HomeIndiaಯುವ ಜನರು ಮತ್ತು ಭಕ್ತಿ: ಮೋದಿ ಮೆಚ್ಚಿದ ಭಜನ್ ಕ್ಲಬ್ಬಿಂಗ್!

ಯುವ ಜನರು ಮತ್ತು ಭಕ್ತಿ: ಮೋದಿ ಮೆಚ್ಚಿದ ಭಜನ್ ಕ್ಲಬ್ಬಿಂಗ್!

ಯುವಕರ ಭಕ್ತಿ ಹಾದಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜೆನ್‌ ಜಿ ಭಜನ್‌ ಕ್ಲಬ್‌ ಕುರಿತು ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 130ನೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ.

ನರೇಂದ್ರ ಮೋದಿ, “ಆಧ್ಯಾತ್ಮಿಕತೆ ಮತ್ತು ಸಂಪ್ರದಾಯವನ್ನು ಆಧುನಿಕ ಸಂಸ್ಕೃತಿಯೊಂದಿಗೆ ಸುಂದರವಾಗಿ ಸಮ್ಮಿಳಿತಗೊಳಿಸಲಾಗಿದೆ” ಎಂದು ಶ್ಲಾಘಿಸಿದರು.

ಮನ್ ಕಿ ಬಾತ್‌ನಲ್ಲಿ ಮೋದಿ, “ಯುವ ಭಾರತ ಭಜನ್ ಕ್ಲಬ್ಬಿಂಗ್ ಎಂಬುದನ್ನು ಇಷ್ಟಪಟ್ಟಿರುವುದು, ಅಪ್ಪಿಕೊಳ್ಳುತ್ತಿರುವುದು ಭಕ್ತಿ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಆಧುನಿಕ ಸಂವೇದನೆಗಳ ಅರ್ಥಪೂರ್ಣ ಸಮ್ಮಿಲನವಾಗಿದೆ” ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಜೆನ್-ಜಿ ಯುವಕರನ್ನು ಇದು ಆಕರ್ಷಿಸುತ್ತಿದೆ. ಯುವಕರು ಸಮುದಾಯದ ಜೊತೆ ಸೇರಿ ಗುಂಪು ಗುಂಪಾಗಿ ಸೇರಿ ಭಜನೆ ಮತ್ತು ಭಕ್ತಿಗೀತೆಗಳನ್ನು ಹಾಡುವ ಈ ಪ್ರವೃತ್ತಿ ಜಾಗತಿಕ ಸಂಗೀತ ಕಚೇರಿಗಳಿಗೆ ಕಡಿಮೆ ಇಲ್ಲ” ಎಂದು ಬಣ್ಣಿಸಿದ್ದಾರೆ.

“ಈ ಚಳುವಳಿ ಭಜನೆಗಳ ಪವಿತ್ರತೆ ಮತ್ತು ಸಾರವನ್ನು ಉಳಿಸಿಕೊಳ್ಳುತ್ತಲೇ, ಆಧ್ಯಾತ್ಮಿಕತೆಯನ್ನು ಆಧುನಿಕತೆಯೊಂದಿಗೆ ಬೆರೆಸುವ ಒಂದು ಚಿಂತನಾಶೀಲ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟರು.

“ಭಜನೆಗಳು ಮತ್ತು ಕೀರ್ತನೆಗಳು ಶತಮಾನಗಳಿಂದಲೂ ಭಾರತೀಯ ಸಂಸ್ಕೃತಿಯ ಆಧ್ಯಾತ್ಮಿಕ ಬೆನ್ನೆಲುಬಾಗಿವೆ. ಇವುಗಳನ್ನು ಸಾಂಪ್ರದಾಯಿಕವಾಗಿ ದೇವಾಲಯಗಳಲ್ಲಿ, ಕಥಾ ಶ್ರವಣಗಳ ಸಮಯದಲ್ಲಿ ಮತ್ತು ತಲೆಮಾರುಗಳಿಂದ ಕಾಪಾಡಿಕೊಂಡು ಬರಲಾಗುತ್ತಿದೆ ಹಾಗೂ ಪ್ರತಿಯೊಂದು ಯುಗವು ತನ್ನದೇ ಆದ ರೀತಿಯಲ್ಲಿ ಭಕ್ತಿಯನ್ನು ವ್ಯಕ್ತಪಡಿಸುತ್ತಾ ಬಂದಿದೆ” ಎಂದರು.

” ಯುವಜನತೆಯು ಭಕ್ತಿಯ ಮನೋಭಾವವನ್ನು ತಮ್ಮ ದೈನಂದಿನ ಅನುಭವಗಳು ಮತ್ತು ಜೀವನಶೈಲಿಯೊಂದಿಗೆ ಬೆಸೆದುಕೊಂಡಿದ್ದಾರೆ. ಈ ಬದಲಾದ ಮನಸ್ಥಿತಿಯೇ ಭಜನ್ ಕ್ಲಬ್ಬಿಂಗ್‌ನಂತಹ ಹೊಸ ಸಾಂಸ್ಕೃತಿಕ ಅಭಿವ್ಯಕ್ತಿಗಳ ಉದಯಕ್ಕೆ ಕಾರಣವಾಗಿದೆ” ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಉಲ್ಲೇಖಿಸಿದ ಮೋದಿ, “ಈ ವೇದಿಕೆಯನ್ನು ದೀಪಗಳು, ಸಂಗೀತ ಮತ್ತು ಇತರ ವ್ಯವಸ್ಥೆಗಳು ಅಲಂಕರಿಸಿವೆ. ಅಲ್ಲಿನ ವಾತಾವರಣವು ಯಾವುದೇ ಸಂಗೀತ ಕಚೇರಿಗಿಂತ ಕಡಿಮೆ ಇಲ್ಲ. ಆದರೆ ಅಲ್ಲಿ ಹಾಡಲಾಗುವ ಪ್ರತಿ ಹಾಡು ಸಹ ಸಂಪೂರ್ಣ ಸಮರ್ಪಣೆ ಮತ್ತು ಭಕ್ತಿಯಿಂದ ಕೂಡಿದೆ” ಎಂದು ಮೆಚ್ಚುಗೆ ಸೂಚಿಸಿದರು.

“ಈ ಕಾರ್ಯಕ್ರಮಗಳಲ್ಲಿ ಭಜನೆಗಳ ಘನತೆ ಮತ್ತು ಪವಿತ್ರತೆಯನ್ನು ಸಂಪೂರ್ಣವಾಗಿ ಗೌರವಿಸಲಾಗುತ್ತಿದೆ. ಇದು ಹೃದಯಸ್ಪರ್ಶಿಯಾಗಿದೆ, ಭಕ್ತಿಯನ್ನು ಇಲ್ಲಿ ಹಗುರವಾಗಿ ಪರಿಗಣಿಸುತ್ತಿಲ್ಲ. ಶಬ್ದಗಳ ಪಾವಿತ್ರ್ಯತೆಗಾಗಲಿ ಅಥವಾ ಭಾವನೆಗಾಗಲಿ ಇಲ್ಲಿ ಧಕ್ಕೆ ಉಂಟಾಗುತ್ತಿಲ್ಲ” ಎಂದರು.

ಏನಿದು ಭಜನ್ ಕ್ಲಬ್ಬಿಂಗ್?: ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಭಜನ್ ಕ್ಲಬ್ಬಿಂಗ್ ಈಗ ಅಮೆರಿಕದಂತಹ ದೇಶಗಳಿಗೂ ಹಬ್ಬುತ್ತಿದೆ. ಇದು ಭಕ್ತಿ ಸಂಗೀತವನ್ನು ಸಮಕಾಲೀನ ಲೈವ್ ಪ್ರದರ್ಶನಗಳ ದೃಷ್ಟಿಕೋನದಲ್ಲಿ ಮರುರೂಪಿಸುತ್ತಿದೆ.

ಈ ವಿಶಿಷ್ಟ ಶೈಲಿಯು ಸಾಂಪ್ರದಾಯಿಕ ಭಜನೆಗಳನ್ನು ಲೈವ್ ಬ್ಯಾಂಡ್‌ಗಳು, ಆಕರ್ಷಕ ದೀಪಾಲಂಕಾರ ಮತ್ತು ಉತ್ಸಾಹಭರಿತ ಹಾಗೂ ಮದ್ಯಪಾನ ಮುಕ್ತ ಪರಿಸರದಂತಹ ಕನ್ಸರ್ಟ್ ಶೈಲಿಯ ಅಂಶಗಳೊಂದಿಗೆ ಸಂಯೋಜಿಸುತ್ತದೆ.

ಭಕ್ತಿ ರಚನೆಗಳನ್ನು ಸಾಂಪ್ರದಾಯಿಕ ದೇವಾಲಯದ ಶೈಲಿಗಿಂತ ಭಿನ್ನವಾಗಿ ಇಲ್ಲಿ ಮರು ರೂಪಿಸಿ ಹಾಡಲಾಗುತ್ತದೆ. ಬ್ಯಾಕ್‌ಸ್ಟೇಜ್ ಸಿಬ್ಲಿಂಗ್ಸ್ ಮತ್ತು ಕೇಶವಂ ನಂತಹ ಭಕ್ತಿ ರಾಕ್ ಬ್ಯಾಂಡ್‌ಗಳು, ಭಜನೆಗಳಿಗೆ ಈ ಹೊಸ ಮತ್ತು ಅದ್ಭುತ ಶಕ್ತಿಯನ್ನು ತುಂಬುವ ಮೂಲಕ ಯುವ ಪ್ರೇಕ್ಷಕರನ್ನು ಸೆಳೆಯುತ್ತಿವೆ.

ಜೆನ್-ಜಿ ಯುವಜನತೆಯು ತಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಆಧುನಿಕ, ತಲ್ಲೀನಗೊಳಿಸುವ ಮತ್ತು ತಮ್ಮ ಜೀವನಶೈಲಿಗೆ ಒಪ್ಪುವ ರೀತಿಯಲ್ಲಿ ಮರುಸಂಪರ್ಕ ಸಾಧಿಸಲು ಬಯಸುತ್ತಿರುವುದರಿಂದ ಭಜನ್ ಕ್ಲಬ್ಬಿಂಗ್ ಜನಪ್ರಿಯತೆಯನ್ನು ಗಳಿಸುತ್ತಿದೆ. ಸೋಶಿಯಲ್ ಮೀಡಿಯಾವು ಮನುಷ್ಯನನ್ನು ಏಕಾಂಗಿಯನ್ನಾಗಿಸುತ್ತಿರುವ ಈ ಕಾಲದಲ್ಲಿ, ಈ ಪ್ರವೃತ್ತಿಯು ಸಮುದಾಯದ ಬಲವಾದ ಭಾವನೆ ಮತ್ತು ಒಗ್ಗೂಡುವಿಕೆಯನ್ನು ನೀಡುತ್ತಿದೆಯಲ್ಲದೆ, ಅರ್ಥಪೂರ್ಣವಾದ ಆಫ್‌ಲೈನ್ ಸಂಪರ್ಕಗಳನ್ನು ಸೃಷ್ಟಿಸುತ್ತಿದೆ. ಎಲ್ಲಾ ವಯೋಮಾನದವರು, ಹಿನ್ನೆಲೆ ಮತ್ತು ನಂಬಿಕೆಯವರಿಗೂ ಮುಕ್ತವಾಗಿರುವ ಈ ಕೂಟಗಳು, ದೀಪಗಳು ಮತ್ತು ನೃತ್ಯ ಮೈದಾನಗಳನ್ನು ಹೊಂದಿದ್ದು, ದೊಡ್ಡ ಮಟ್ಟದ ಸಂಗೀತ ಉತ್ಸವಗಳ ವೈಬ್ ಅನ್ನು ಪ್ರತಿಬಿಂಬಿಸುತ್ತವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular