ಉಡುಪಿ: ಉಡುಪಿಯ ಕಲ್ಸಂಕ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಟ್ರಕ್ ಅಡಿಗೆ ಸಿಲುಕಿ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಮಣಿಪಾಲ ಎಂಐಟಿ ಕ್ವಾಟ್ರಸ್ ನಿವಾಸಿ ಅವಿನಾಶ್(19) ಮೃತಪಟ್ಟ ಯುವಕ. ಸ್ನೇಹಿತರೊಂದಿಗೆ ಮಲ್ಪೆ ಬೀಚ್ ಗೆ ಹೋಗಿದ್ದ ಅವಿನಾಶ್ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಲ್ಸಂಕ ಜಂಕ್ಷನ್ ನಲ್ಲಿ ಸಿಗ್ನಲ್ ಬೀಳುತ್ತಿದ್ದಂತೆ ವೇಗವಾಗಿ ಸ್ಕೂಟಿ ಚಾಲನೆ ಮಾಡಿದ್ದಾರೆ. ಇದರಿಂದ ಆಯತಪ್ಪಿ ಟ್ರಕ್ ಟೈಯರ್ ಅಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

