ಹೆಚ್.ಐ.ವಿ ಭಾದಿತ/ ಸೊಂಕಿತರು ಕರೆ ಮಾಡಿ ಅವರ ದೂರು ದುಮ್ಮಾನಗಳ ಬಗ್ಗೆ ನೇರವಾಗಿ ಓಂಬಡ್ಸ್‌ಮನ್ ರವರೊಂದಿಗೆ ಸಂವಾದ ಮಾಡಲು ಇದೊಂದು ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಬಾದಿತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಹೆಚ್.ಐ.ವಿ ಕಾಯ್ದೆ-2017 ರ ಪ್ರಕಾರ ಸಂವಾದಿತರ ಕರೆಗಳನ್ನು ಹಾಗೂ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರವೇನ್ಷನ್ ಸೊಸೈಟಿಯ ಒಂಬುಡ್ಸ್ ಮನ್ ಶ್ರೀಮತಿ ಗಂಗೂಬಾಯಿ ರಮೇಶ ಮಾನಕರ ಅವರು ತಿಳಿಸಿದ್ದಾರೆ.

