HomeSpecialಪ್ರೇಯಸಿ ಮನೆಗೆ ಹೋಗಿದ್ದ ಪ್ರೇಮಿ ಟ್ರಂಕ್ ನಲ್ಲಿ ಲಾಕ್ : ಕಾನ್ಪುರ ಪೊಲೀಸರ ಎಂಟ್ರಿಯಿಂದ ಬದುಕುಳಿದ...

ಪ್ರೇಯಸಿ ಮನೆಗೆ ಹೋಗಿದ್ದ ಪ್ರೇಮಿ ಟ್ರಂಕ್ ನಲ್ಲಿ ಲಾಕ್ : ಕಾನ್ಪುರ ಪೊಲೀಸರ ಎಂಟ್ರಿಯಿಂದ ಬದುಕುಳಿದ ಯುವಕ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರೇಮಿಗಳಿಬ್ಬರ ತುಂಟಾಟವೊಂದು ಪ್ರಾಣಾಪಾಯದ ಹಂತಕ್ಕೆ ತಲುಪಿದ ಘಟನೆ ನಡೆದಿದೆ. ಪ್ರೇಯಸಿಯ ಕುಟುಂಬದವರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕನೊಬ್ಬ ಸುಮಾರು 45 ನಿಮಿಷಗಳ ಕಾಲ ಕಬ್ಬಿಣದ ಪೆಟ್ಟಿಗೆಯೊಳಗೆ (Iron Trunk) ಸಿಲುಕಿ ಉಸಿರುಗಟ್ಟುವ ಪರಿಸ್ಥಿತಿ ಎದುರಿಸಿದ್ದಾನೆ.

ನಡೆದಿದ್ದೇನು? ಕಾನ್ಪುರದ ಚಕೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಮನೆಯವರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಆಕೆ ತನ್ನ ಪ್ರಿಯಕರನನ್ನು ಮನೆಗೆ ಆಹ್ವಾನಿಸಿದ್ದಳು. ಪ್ರಿಯಕರ ಕೂಡ ಯುವತಿಯ ಮನೆಯಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ವಾಸವಿದ್ದನು. ಇಬ್ಬರೂ ಮಾತನಾಡುತ್ತಾ ಕುಳಿತಿದ್ದಾಗ, ಪಕ್ಕದ ಮನೆಯಲ್ಲೇ ವಾಸವಿದ್ದ ಯುವತಿಯ ಅತ್ತೆಗೆ ಏನೋ ಅನುಮಾನ ಬಂದಿದೆ. ಕೂಡಲೇ ಅವರು ಬಂದು ಬಾಗಿಲು ಬಡಿದಿದ್ದಾರೆ.

ಅತ್ತೆಯ ಧ್ವನಿ ಕೇಳಿ ಗಾಬರಿಯಾದ ಯುವತಿ, ತನ್ನ ಪ್ರಿಯಕರನನ್ನು ಮನೆಯಲ್ಲಿದ್ದ ದೊಡ್ಡ ಕಬ್ಬಿಣದ ಪೆಟ್ಟಿಗೆಯೊಳಗೆ ಅಡಗಿಸಿ ಹೊರಗಿನಿಂದ ಬೀಗ ಹಾಕಿದ್ದಾಳೆ. ನಂತರ ಏನೂ ತಿಳಿಯದವಳಂತೆ ಬಾಗಿಲು ತೆರೆದಿದ್ದಾಳೆ. ಆದರೆ ಅತ್ತೆಗೆ ಅನುಮಾನ ಬಗೆಹರಿಯದ ಕಾರಣ, ಮನೆಯವರನ್ನು ಕರೆಸಿ ಇಡೀ ಮನೆಯನ್ನು ತಪಾಸಣೆ ಮಾಡಿದ್ದಾರೆ. ಈ ತಪಾಸಣೆ ಸುಮಾರು 45 ನಿಮಿಷಗಳ ಕಾಲ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೆಟ್ಟಿಗೆಯಿಂದ ಕೇಳಿಬಂತು ಸದ್ದು! ಮನೆಯವರೆಲ್ಲಾ ಹುಡುಕಾಡಿದರೂ ಯಾರೂ ಸಿಗದಿದ್ದಾಗ, ಕೊನೆಗೆ ಕಬ್ಬಿಣದ ಪೆಟ್ಟಿಗೆಯ ಒಳಗಿನಿಂದ ವಿಚಿತ್ರ ಶಬ್ದ ಕೇಳಿಬಂದಿದೆ. ಮನೆಯವರು ಪೆಟ್ಟಿಗೆಯ ಕೀ ಕೇಳಿದಾಗ ಯುವತಿ ಕೊಡಲು ನಿರಾಕರಿಸಿದ್ದಾಳೆ. ಅನುಮಾನಗೊಂಡ ಕುಟುಂಬದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಲವಂತವಾಗಿ ಕೀ ಪಡೆದು ಪೆಟ್ಟಿಗೆ ತೆರೆದಾಗ, ಬೆವರಿನಿಂದ ಪೂರ್ತಿ ಒದ್ದೆಯಾಗಿದ್ದ ಯುವಕ ಉಸಿರಾಡಲು ಪರದಾಡುತ್ತಿರುವುದು ಕಂಡುಬಂದಿದೆ.

ಯುವಕನನ್ನು ಹೊರತೆಗೆಯುತ್ತಿದ್ದಂತೆ ಸಿಟ್ಟಾದ ಯುವತಿಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಯುವಕನನ್ನು ರಕ್ಷಿಸಿದ್ದಾರೆ. ಸದ್ಯ ಶಾಂತಿ ಭಂಗ ಉಂಟುಮಾಡಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಈ ಯುವಕನ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ಪ್ರೇಮದ ದಾರಿ ಎಷ್ಟು ಅಪಾಯಕಾರಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular