HomeLatest NewsNCC ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ

NCC ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ

ಚಿತ್ರದುರ್ಗ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27 ನೇ ಸಾಲಿಗಾಗಿ ಮಾಜಿ ಸೈನಿಕರನ್ನು ಒಪ್ಪಂದದ ಮೇರೆಗೆ 30 ಎನ್.ಸಿ.ಸಿ ಬೋಧಕರ ಹುದ್ದೆಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿದೆ.

ಆಸಕ್ತರು ಅರ್ಜಿಯನ್ನು ಇಮೇಲ್ [email protected] ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa) KSCMF, Building, 4th Floor, No-8, Cunningham Road, Bengaluru-560001 ಮೂಲಕ ಸಲ್ಲಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ https://nccindia.gov.in ಜಾಲತಾಣವನ್ನು ಅಥವಾ ಮೊಬೈಲ್ 9481405092 ಗೆ ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular