ಜನವರಿ 30ರಂದು ಮಹಾತ್ಮಾ ಗಾಂಧೀಜಿ ಪುಣ್ಯತಿಥಿ ಪ್ರಯುಕ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಹಾಗೂ ಧಾರವಾಡ ವಧಾಲಯಗಳು ಹಾಗೂ ಎಲ್ಲ ಮಾಂಸ ಮಾರಾಟ ಮಾಡುವ ವ್ಯಾಪಾರಸ್ಥರು ತಮ್ಮ ಮಾಂಸದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಇದಕ್ಕೆ ವಿರುದ್ಧವಾಗಿ ಯಾರಾದರೂ ಮಾಂಸದ ಅಂಗಡಿಗಳನ್ನು ತೆಗೆದಲ್ಲಿ ಪಾಲಿಕೆಯಿಂದ ಅವರ ಲೈಸನ್ಸನ್ನು ರದ್ದುಪಡಿಸಿ ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

