ಬೆಂಗಳೂರು: ವಿದೇಶಿ ಮಹಿಳೆಗೆ ಚೆಕ್ಕಿಂಗ್ ಹೆಸರಲ್ಲಿ ಲೈಮ್ಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಎಫ್.ಡಿ.ಅಪ್ಪನ್ ಅಹ್ಮದ್ ಬಂಧಿತ ಸಿಬ್ಬಂದಿ. ದಕ್ಷಿಣ ಕೊರಿಯಾ ಮೂಲದ 36 ವರ್ಷದ ಮಹಿಳೆ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ಮರಳಿ ದಕ್ಷಿಣ ಕೊರಿಯಾಗೆ ತೆರಳಲು ಬೆಂಗಳೂರು ಏರ್ ಪೋರ್ಟ್ ಗೆ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಪರೀಶೀಲನೆ ಮುಗಿಸಿ ಬೋರ್ಡಿಂಗ್ ಆಗುವ ವೇಳೆ ಸಿಬ್ಬಂದಿ ಅಪ್ಪನ್ ಅಹ್ಮದ್ ಎದುರಾಗಿದ್ದು, ಮಹಿಳಾ ಪ್ರಯಾಣಿಕರ ಬಳಿ ತಮ್ಮ ಬ್ಯಾಗೇಜ್ ಪರಿಶೀಲಿಸಬೇಕು ಎಂದು ಪರಿಸೀಲಿಸಿದ್ದಾನೆ.
ಬಳಿಕ ವೈಯಕ್ತಿಕವಾಗಿ ಪರಿಶೀಲನೆಗೆ ಒಳಪಡಬೇಕು ಎಂದು ಮಹಿಳೆಯನ್ನು ಕರೆದೊಯ್ದಿದ್ದಾನೆ. ಈ ವೇಳೆ ಪುರುಷರ ಶೌಚಾಲಯಕ್ಕೆ ಮಹಿಳೆಯನ್ನು ಕರೆದೊಯ್ದು ಮಹಿಳೆಯ ಮೈ-ಕೈ ಮುಟ್ಟಿ, ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ಸಿಐಎಸ್ ಎಫ್ ಸಿಬ್ಬಂದಿಗೆ ತಿಳಿಸಿದ್ದಾರೆ. ತಕ್ಷಣ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳೆಯಿಂದ ದೂರು ಪಡೆದ ಪೊಲೀಸರು ಆರೋಪಿ ಅಪ್ಪನ್ ಅಹ್ಮದ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಯಾಣಿಕರಿಗೆ ಬೋರ್ಡಿಂಗ್ ಆಗಲು ಅನುಕೂಲವಾಗಲೆಂದು ನಿಯೋಜನೆಗೊಂಡಿದ್ದ ಅಪ್ಪನ್ ಅಹ್ಮದ್, ಕರ್ತವ್ಯ ದುರುಪಯೋಗ ಮಾಡಿಕೊಂಡಿದ್ದಾನೆ.

