ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ವಿಮಾನಯಾನ ಸಂಸ್ಥೆಯ ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷದ ಮೊಹಮ್ಮದ್ ಆಫ್ನಾನ್ ಅಹಮದ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ತಪಾಸಣೆಯ ನೆಪದಲ್ಲಿ ಸಿಬ್ಬಂದಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ದಕ್ಷಿಣ ಕೊರಿಯಾದ 32 ವರ್ಷದ ಉದ್ಯಮಿ ಆಗಿರುವ ಮಹಿಳೆ ದೂರು ನೀಡಿದ್ದು, ವಿಮಾನ ನಿಲ್ದಾಣ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ 2ರ ಅಂತರರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿ ಘಟನೆ ನಡೆದಿದೆ.
ಕಮ್ಮನಹಳ್ಳಿಯ ಮೊಹಮ್ಮದ್ ಅಫ್ನಾನ್ ಅಹಮದ್ ಪ್ರಯಾಣಿಕರ ತಪಾಸಣೆ ನಡೆಸಲು ಅಧಿಕಾರವಿಲ್ಲದಿದ್ದರೂ ಮಹಿಳೆಯರನ್ನು ಪರಿಶೀಲಿಸುವ ನೆಪದಲ್ಲಿ ಎದೆ ಮತ್ತು ಖಾಸಗಿ ಭಾಗ ಮುಟ್ಟಿಸಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ತಬ್ಬಿಕೊಂಡು ಥ್ಯಾಂಕ್ಸ್ ಹೇಳಿ ಅಲ್ಲಿಂದ ತೆರಳಿದ್ದಾನೆ. ಈ ಕುರಿತಾಗಿ ವಿದೇಶಿ ಮಹಿಳೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

