HomeLatest News'ಗೃಹಲಕ್ಷ್ಮಿ' ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಿದ ಮಹಿಳೆ.!

‘ಗೃಹಲಕ್ಷ್ಮಿ’ ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಿದ ಮಹಿಳೆ.!

ಮಂಗಳೂರು : ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಸ್ಕೂಟಿ ಖರೀದಿಸಿ ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಿದ್ದಾರೆ. ರಾಜ್ಯ  ಸರ್ಕಾರ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾರೆ. ಆ ಪ್ರಯಾಣದಲ್ಲಿ ಅವರಿಗೆ ನೆರವಾದದ್ದು ಗೃಹಲಕ್ಷ್ಮಿ ಯೋಜನೆ ಮತ್ತು ಅದರಿಂದ ಖರೀದಿಸಿದ ಒಂದು ಸ್ಕೂಟರ್. ಸ್ಕೂಟರ್ ಬಂದ ನಂತರ ಝೀನತ್ ಅವರು ಮನೆ ಮನೆಗೆ ತೆರಳಿ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಉತ್ತಮ ಆದಾಯ ಗಳಿಸಿ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಹಸಿವನ್ನು ನೀಗಿಸುವುದಲ್ಲದೆ ಜನರ ಅವಶ್ಯಕತೆಗಳನ್ನೂ ಪೂರೈಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿವೆ.

ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ರಾಜ್ಯ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯು ಈಡೇರಿಸುತ್ತಿದೆ ಎಂದು ರಾಜ್ಯ  ಸರ್ಕಾರ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular