HomeLatest Newsಬಂಗಾರ ಪ್ರಿಯರಿಗೆ ಬಿಗ್ ಶಾಕ್: ಒಂದೇ ದಿನಕ್ಕೆ ₹5,020 ಏರಿಕೆ: ₹1.54 ಲಕ್ಷದ ಗಡಿ ದಾಟಿದ...

ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಒಂದೇ ದಿನಕ್ಕೆ ₹5,020 ಏರಿಕೆ: ₹1.54 ಲಕ್ಷದ ಗಡಿ ದಾಟಿದ ಹತ್ತು ಗ್ರಾಂ ಚಿನ್ನದ ಬೆಲೆ

ಬೆಂಗಳೂರು: ಇಂದು ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಕಾದು ಕುಳಿತಿದ್ದ ಜನರಿಗೆ ಬುಧವಾರ ಬೆಳ್ಳಂಬೆಳಗ್ಗೆ ಭಾರಿ ಆಘಾತ ಎದುರಾಗಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಭಾರತೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಚಿನ್ನದ ಬೆಲೆ ಹಿಂದೆಂದೂ ಕಾಣದ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.ಬೆಳ್ಳಿ ಬೆಲೆ ಇಂದು 5 ರೂಪಾಯಿ ಏರಿಕೆಯಾಗಿದ್ದು, ಗ್ರಾಂ ಬೆಲೆ 325 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 5 ಸಾವಿರ ಹೆಚ್ಚಳ ಆಗಿ, ಕೆಜಿಗೆ 3,25,000 ರೂಪಾಯಿಗೆ ಏರಿದೆ.

ಬೆಲೆ ಏರಿಕೆಗೆ ಕಾರಣವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿರುವುದು ಮತ್ತು ಯುರೋಪ್ ಜೊತೆಗಿನ ಸಂಭಾವ್ಯ ವ್ಯಾಪಾರ ಯುದ್ಧದ ಭೀತಿ ಜಾಗತಿಕ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದೆ. ಡಾಲರ್ ಮೌಲ್ಯ ದುರ್ಬಲಗೊಳ್ಳುತ್ತಿದ್ದಂತೆಯೇ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದಾರೆ. ಇದರ ನೇರ ಪರಿಣಾಮವಾಗಿ ಇಂದು ಚಿನ್ನದ ಬೆಲೆ ಗಗನಕ್ಕೇರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮಾಣಇಂದಿನ ಬೆಲೆ (₹)ನಿನ್ನೆಯ ಬೆಲೆ (₹)ವ್ಯತ್ಯಾಸ (₹)

1 ಗ್ರಾಂ15,48014,978+ 502

8 ಗ್ರಾಂ (ಪವನ್)1,23,8401,19,824+ 4,016

10 ಗ್ರಾಂ1,54,8001,49,780+ 5,020

100 ಗ್ರಾಂ15,48,000 14,97,800+ 50,200

100 ಗ್ರಾಂ ಚಿನ್ನದ ಮೇಲೆ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 50,200 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನಕ್ಕೆ ಈಗ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿದ್ದ ಮಧ್ಯಮ ವರ್ಗದ ಜನರಿಗೆ ಈ ಬೆಲೆ ಏರಿಕೆ ಬರಸಿಡಿಲಿನಂತೆ ಬಂದೆರಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ

ಬೆಂಗಳೂರು: 14,190 ರೂ

ಚೆನ್ನೈ: 14,250 ರೂ

ಮುಂಬೈ: 14,190 ರೂ

ದೆಹಲಿ: 14,205 ರೂ

ಕೋಲ್ಕತಾ: 14,190 ರೂ

ಕೇರಳ: 14,190 ರೂ

ಅಹ್ಮದಾಬಾದ್: 14,195 ರೂ

ಜೈಪುರ್: 14,205 ರೂ

ಲಕ್ನೋ: 14,205 ರೂ

ಭುವನೇಶ್ವರ್: 14,190 ರೂ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular