ಫಾರ್ಮಸಿ:ಕೋರ್ಸುಗಳಿಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಜ.23ರವರೆಗೆ ಅವಧಿ ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಪ್ರಾಧಿಕಾರದ ಶುಲ್ಕ ರೂ 50 ಪಾವತಿಸಿ ಕನ್ಫರ್ಮೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಂಡು ಅವಧಿ ವಿಸ್ತರಣೆಯ ಅವಕಾಶ ಬಳಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಸೀಟು ಹಂಚಿಕೆ ಫಲಿತಾಂಶ, ಶುಲ್ಕ ಪಾವತಿ ಮತ್ತು ಪ್ರವೇಶಾತಿ – ದಿನಾಂಕ ವಿಸ್ತರಣೆ
2025ನೇ ಸಾಲಿನ ಪ್ರಥಮ ಡಿ-ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆಯ ಫಲಿತಾಂಶವನ್ನು ದಿನಾಂಕ 14-01-2026 ರಂದು ಪ್ರಕಟಿಸಲಾಗಿದೆ. ಸೀಟು ಹಂಚಿಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ರೂ.50/- ಪ್ರಾಧಿಕಾರದ ಶುಲ್ಕವನ್ನು ಪಾವತಿಸಿ ಕನ್‌ಫರ್‌ಮೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿ ದಿನಾಂಕ 20-01-2026 ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ಸೂಚಿಸಲಾಗಿತ್ತು.
ಸಂಜೆ 5.30 ರ ವರೆಗೆ ಅಭ್ಯರ್ಥಿಗಳ ಮನವಿ ಮೇರೆಗೆ ಶುಲ್ಕವನ್ನು ಪಾವತಿಸಿ ಕನ್‌ಫರ್‌ಮೇಶನ್ ಸ್ಲಿಪ್ ಡೌನ್‌ಲೋಡ್ ಮಾಡಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ದಿನಾಂಕ 23-01-2026 ಅವಧಿಯನ್ನು ವಿಸ್ತರಿಸಲಾಗಿದೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸಹಾಯವಾಣಿ: 080-23 460 460. ಇ-ಮೇಲ್: [email protected] ಸಂಪರ್ಕಿಸುವುದು.

