HomeLatest NewsSHOCKING: ಗಾಳಿಪಟ ಹಾರಿಸುವಾಗ ದುರಂತ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಯುವಕ ದುರ್ಮರಣ

SHOCKING: ಗಾಳಿಪಟ ಹಾರಿಸುವಾಗ ದುರಂತ: ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಯುವಕ ದುರ್ಮರಣ

ಬೀದರ್: ಗಾಳಿಪಟ ಹಿಡಿಯಲು ಹೋಗಿ ಯುವಕನೊಬ್ಬ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ.

ವಾಂಜರಿ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಶಶಿಕುಮಾರ್ ಶಿವಾನಂದ್ (19) ಮೃತ ದುರ್ದೈವಿ. ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.

ಗಾಳಿಪಟ ಹಾರಿಸುತ್ತಿದ್ದಾಗ ಏಕಾಏಕಿ ದಾರ ತುಂಡಾಗಿದೆ. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ ಆಯತಪ್ಪಿ ಯುವಕ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular