HomeLatest Newsದಾವಣಗೆರೆ ದಕ್ಷಿಣ ಉಪ ಚುನಾವಣೆ: ಕ್ಷೇತ್ರದಲ್ಲಿ 1,17,603 ಮಹಿಳೆಯರು ಸೇರಿ ಒಟ್ಟು 2,31,158 ಮತದಾರರು

ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕ್ಷೇತ್ರದಲ್ಲಿ 1,17,603 ಮಹಿಳೆಯರು ಸೇರಿ ಒಟ್ಟು 2,31,158 ಮತದಾರರು

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕರ‍್ಯಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವೀಕ್ಷಕರು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಹಕ್ಕು, ಆಕ್ಷೇಣೆಗಳಿದ್ದಲ್ಲಿ ಸಲ್ಲಿಸಲು ಸರ್ಕಾರದ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಡಾ. ಶಮ್ಲಾ ಇಕ್ಬಾಲ್ ತಿಳಿಸಿದರು.

 ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಜನವರಿ 3 ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ, ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಆಕ್ಷೇಪಣೆ ಮತ್ತು ಹಕ್ಕುಗಳನ್ನು ಸಲ್ಲಿಸಲು ಜನವರಿ 24 ರವರೆಗೆ ಅವಕಾಶವಿದೆ. ಜನವರಿ 11 ರಂದು ನಡೆದ ವಿಶೇಷ ಅಭಿಯಾನದಲ್ಲಿ 85 ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ಅಭಿಯಾನವು ಜನವರಿ 18 ರಂದು ನಡೆಯಲಿದೆ. ಫೆಬ್ರವರಿ 14 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಮತಗಟ್ಟೆಗಳ ಪುನರ್ ವಿಂಗಡಣೆ;

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆ 217 ಮತಗಟ್ಟೆಗಳಿದ್ದವು. ನಿಯಮದಂತೆ 1200 ಕ್ಕಿಂತ ಹೆಚ್ಚು ಮತದಾರರಿರುವ ಕಡೆ ಹೊಸ ಮತಗಟ್ಟೆಗಳನ್ನು ಸೃಜಿಸಿ, ಪ್ರಸ್ತುತ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 24 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗಿದ್ದು, ಮೂಲಭೂತ ಸೌಕರ್ಯಗಳಾದ ರ‍್ಯಾಂಪ್ ಮುಂತಾದವುಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.

ರಾಜಕೀಯ ಪಕ್ಷಗಳಿಗೆ ಎರಡು ಪ್ರಮುಖ ಮನವಿಗಳನ್ನು ಮಾಡಿ ಬಿಎಲ್ಎ ಪ್ರತಿಯೊಂದು ಮತಗಟ್ಟೆ ಮಟ್ಟದಲ್ಲಿ ರಾಜಕೀಯ ಪಕ್ಷಗಳು ತಮ್ಮ ಏಜೆಂಟ್ ಗಳನ್ನು ನೇಮಕ ಮಾಡಿ ಪಟ್ಟಿಯನ್ನು ನೀಡಬೇಕು. ಇದರಿಂದ ಮೃತ ಮತದಾರರ ಹೆಸರು ಕೈಬಿಡುವುದು ಮತ್ತು ವಿಳಾಸ ಬದಲಾವಣೆ ಕಾರ್ಯ ಸುಲಭವಾಗುತ್ತದೆ. ಹೆಸರು ಸೇರ್ಪಡೆಗೆ ಯುವ ಮತದಾರರು ಹಾಗೂ ಕೈಬಿಟ್ಟು ಹೋದ ಮತದಾರರ ಹೆಸರನ್ನು ಸೇರಿಸಲು ಸಹಕರಿಸಬೇಕು ಎಂದರು.

ಕ್ಷೇತ್ರದ ಮತದಾರರ ವಿವರ;

ಕರಡು ಪಟ್ಟಿಯಂತೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,31,158 ಮತದಾರರಿದ್ದಾರೆ. ಇದರಲ್ಲಿ ಪುರುಷ ಮತದಾರರು 1,13,555 ಹಾಗೂ ಮಹಿಳಾ ಮತದಾರರು 1,17,603 ಇದ್ದು, ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಲಿಂಗ ಅನುಪಾತ:

ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಲಿಂಗ ಅನುಪಾತವು 1036 ಆಗಿದ್ದು, ಇದು ಜಿಲ್ಲೆಯ ಜನಗಣತಿ ಅನುಪಾತಕ್ಕಿಂತ 972 ಮತ್ತು ರಾಜ್ಯದ ಸರಾಸರಿಗಿಂತಲೂ ಹೆಚ್ಚಿದೆ. ಮತದಾರರ ಜನಸಂಖ್ಯೆ ಅನುಪಾತ ಶೇ. 83.62 ರಷ್ಟಿದೆ. ಯುವ ಮತದಾರರಾದ 18-19 ವಯೋಮಾನದವರು ಕ್ಷೇತ್ರದಲ್ಲಿ ಒಟ್ಟು 1,692 ಮತದಾರರಿದ್ದು, ಇದರಲ್ಲಿ 905 ಪುರುಷ, 787 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ವಿಕಲಚೇತನ ಮತದಾರರು ಒಟ್ಟು 2,544 ಮತದಾರರಿದ್ದು, ಇದರಲ್ಲಿ 1,397 ಪುರುಷರು ಮತ್ತು 1,147 ಮಹಿಳೆಯರಿದ್ದಾರೆ.

ವಿವಿಧ ವಯೋಮಾನದ ಮತದಾರರ ಅಂಕಿ-ಅಂಶಗಳು;

 ಯುವ ಮತದಾರರು, 18-19 ವರ್ಷದ ವಯೋಮಾನದ ಒಟ್ಟು 1,692 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 905 ಪುರುಷರು ಮತ್ತು 787 ಮಹಿಳಾ ಮತದಾರರಿದ್ದಾರೆ.

20-29 ವರ್ಷ: ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ವಿಭಾಗಗಳಲ್ಲಿ ಇದೂ ಒಂದು. ಒಟ್ಟು 43,616 ಮತದಾರರಿದ್ದು, ಇದರಲ್ಲಿ 21,601 ಪುರುಷರು, 22,002 ಮಹಿಳೆಯರು ಮತ್ತು 13 ತೃತೀಯ ಲಿಂಗಿ ಮತದಾರರಿದ್ದಾರೆ.

30-39 ವರ್ಷ: ಈ ವಯೋಮಾನದಲ್ಲಿ ಒಟ್ಟು 55,814 ಮತದಾರರಿದ್ದಾರೆ. ಇದರಲ್ಲಿ 26,450 ಪುರುಷರು, 29,349 ಮಹಿಳೆಯರು ಮತ್ತು 15 ತೃತೀಯ ಲಿಂಗಿ ಮತದಾರರಿದ್ದಾರೆ.

ಮಧ್ಯವಯಸ್ಕರು: 40-49 ವರ್ಷ: ಒಟ್ಟು 55,400 ಮತದಾರರಿದ್ದು, ಇದರಲ್ಲಿ 27,507 ಪುರುಷರು, 27,885 ಮಹಿಳೆಯರು ಮತ್ತು 8 ತೃತೀಯ ಲಿಂಗಿಗಳು ಸೇರಿದ್ದಾರೆ.

50-59 ವರ್ಷ: ಈ ವಿಭಾಗದಲ್ಲಿ ಒಟ್ಟು 37,167 ಮತದಾರರಿದ್ದಾರೆ. 18,917 ಪುರುಷರು, 18,245 ಮಹಿಳೆಯರು ಮತ್ತು 5 ತೃತೀಯ ಲಿಂಗಿಗಳು.

ಹಿರಿಯ ನಾಗರಿಕರು: 60-69 ವರ್ಷ: ಒಟ್ಟು 21,314 ಮತದಾರರಿದ್ದಾರೆ. 10,484 ಪುರುಷರು, 10,826 ಮಹಿಳೆಯರು ಮತ್ತು 4 ತೃತೀಯ ಲಿಂಗಿಗಳು.

70-79 ವರ್ಷ: ಈ ವಯೋಮಾನದ ಒಟ್ಟು 10,870 ಮತದಾರರಿದ್ದಾರೆ. ಇದರಲ್ಲಿ 5,310 ಪುರುಷರು ಮತ್ತು 5,560 ಮಹಿಳಾ ಮತದಾರರಿದ್ದಾರೆ.

80 ವರ್ಷ ಮೇಲ್ಪಟ್ಟವರು: ಕ್ಷೇತ್ರದಲ್ಲಿ ಒಟ್ಟು 4,734 ಹಿರಿಯ ಮತದಾರರಿದ್ದಾರೆ. 2,149 ಪುರುಷರು ಮತ್ತು 2,585 ಮಹಿಳೆಯರು ಇದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular