ಇಂದಿನಿಂದ ( ಜನವರಿ 16 ) ಸೆಲೆಬ್ರಿಟಿ ಕ್ರಿಕೆಟ್ ಲೀಗ್ 12ನೇ ಆವೃತ್ತಿ ಆರಂಭವಾಗಿದ್ದು, ವಿಶಾಖಪಟ್ಟಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪಂಜಾಬ್ ದೆ ಶೇರ್ ವಿರುದ್ಧ 31 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ದೆ ಶೇರ್ ಬೌಲಿಂಗ್ ಆರಿಸಿಕೊಂಡು ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಕರ್ನಾಟಕ ಬುಲ್ಡೋಜರ್ಸ್ ಕರಣ್ ಆರ್ಯನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.2 ಓವರ್‌ಗಳಲ್ಲಿ 170 ರನ್‌ಗೆ ಆಲ್‌ಔಟ್ ಆಗಿ ಪಂಜಾಬ್‌ಗೆ 171 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಪಂಜಾಬ್ ದೆ ಶೇರ್ 18.3 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲ್‌ಔಟ್ ಆಯಿತು.
ಕರ್ನಾಟಕ ಬುಲ್ಡೋಜರ್ಸ್ ಪರ ಹೆಚ್ಚು ರನ್ ಗಳಿಸಿದವರು: ಕರಣ್ ಆರ್ಯನ್ 83 (33), ಪ್ರತಾಪ್ 18 (23), ಪ್ರದೀಪ್ 17 (13), ಡಾರ್ಲಿಂಗ್ ಕೃಷ್ಣ 14 (15) ರನ್
ಪಂಜಾಬ್ ದೆ ಶೇರ್ ಪರ ದಕ್ಷ್ ಐದು ವಿಕೆಟ್, ನಿಂಜಾ ಹಾಗೂ ಹಾರ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ದೆ ಶೇರ್ ಪರ ಹೆಚ್ಚು ರನ್ ಗಳಿಸಿದವರು: ರಾಹುಲ್ ಜೇಟ್ಲಿ 68 (44), ಸಾವಂತ್ 28 (24), ಅನುಜ್ 11 (8) ಹಾಗೂ ಮಯೂರ್ 11 (13) ರನ್.
ಕರ್ನಾಟಕ ಬುಲ್ಡೋಜರ್ಸ್ ಪರ ಪ್ರದೀಪ್ ಮೂರು ವಿಕೆಟ್, ಕಾರ್ತಿಕ್ ಹಾಗೂ ಕರಣ್ ತಲಾ ಎರಡು ವಿಕೆಟ್ ಪಡೆದರೆ, ಚಂದನ್ ಒಂದು ವಿಕೆಟ್ ಪಡೆದರು.

