ಬೆಂಗಳೂರು: ಕಳೆದ ಆರು ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನದ ದರಕ್ಕೆ ಇಂದು ಬ್ರೇಕ್ ಬಿದ್ದಿದೆ. ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಬಂಗಾರದ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಆಭರಣ ಖರೀದಿದಾರರಲ್ಲಿ ಕೊಂಚ ನೆಮ್ಮದಿ ತಂದಿದೆ. ಆದರೆ, ಮತ್ತೊಂದೆಡೆ ಬೆಳ್ಳಿ ದರದ ನಾಗಾಲೋಟ ಮಾತ್ರ ಮುಂದುವರಿದಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮ, ಭಾರತದಲ್ಲಿ ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 820 ರೂಪಾಯಿ ಇಳಿಕೆಯಾಗಿದೆ.ಮುಂಬರುವ ಮದುವೆ ಸೀಸನ್ಗೂ (Wedding Season) ಮುನ್ನ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದಿನ ದರ ವಿವರ ಇಲ್ಲಿದೆ.
ಇಂದಿನ ಚಿನ್ನದ ದರ ಎಷ್ಟು? (ಜನವರಿ 15, 2026)
ಇಂದಿನ ದರ ಪಟ್ಟಿ (ಬೆಂಗಳೂರು):
ಲೋಹದ ವಿಧ ತೂಕಇಂದಿನ ದರ
24 ಕ್ಯಾರೆಟ್ ಚಿನ್ನ (ಶುದ್ಧ)10 ಗ್ರಾಂ₹ 1,44,010
22 ಕ್ಯಾರೆಟ್ ಚಿನ್ನ (ಆಭರಣ)10 ಗ್ರಾಂ₹ 1,32,010
ಬೆಳ್ಳಿ (Silver)1 ಕೆಜಿ₹ 2,57,900
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ : ರೂ. 10,801
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ : ರೂ. 13,201
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) : ರೂ. 14,401
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ (1 ಗ್ರಾಂ) ಇಂದಿನ ಬೆಲೆ ಪಟ್ಟಿ:
ನಗರಇಂದು 22K (1 ಗ್ರಾಂ)
ಚೆನ್ನೈ₹ 13,281
ಬೆಂಗಳೂರು₹ 13,201
ಮುಂಬೈ₹ 13,201
ಹೈದರಾಬಾದ್₹ 13,201
ಕೇರಳ₹ 13,201
ಪುಣೆ₹ 13,201
ಕೋಲ್ಕತ್ತಾ₹ 13,201
ದೆಹಲಿ₹ 13,216
ವಡೋದರಾ₹ 13,206
ಅಹಮದಾಬಾದ್₹ 13,206

