ಬೆಂಗಳೂರು : 2025-26 ನೇ ಸಾಲಿನ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯು 2025-26ನೇ ಸಾಲಿಗೆ ಶಾಲೆಗಳಿಗೆ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಕುರಿತು ಸುತ್ತೋಲೆ ಹೊರಡಿಸಿದೆ.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2026.
• ಈ ಸುತ್ತೋಲೆಯು 2025-26ನೇ ಸಾಲಿಗೆ ಮಾತ್ರ ಅನ್ವಯಿಸುತ್ತದೆ.
• ಉಪನಿರ್ದೇಶಕರು (ಆಡಳಿತ) ಈ ವಿಷಯದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
• ಅವಧಿ ವಿಸ್ತರಣೆಯು ಶಾಲೆಗಳಿಗೆ ಅನುಕೂಲ ಕಲ್ಪಿಸುತ್ತದೆ.
ವಿಶೇಷ ಸೂಚನೆ
ಮಾನತೆ ನವೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಮತ್ತು ಕಾಲಾವಧಿ ಮುಗಿದ ಕಾರಣ ನವೀಕರಿಸಿದ ಪರಿಷ್ಕೃತ ದಾಖಲೆಗಳನ್ನು ಆಡಳಿತ ಮಂಡಳಿಗಳು ಎಸ್.ಎ.ಟಿ.ವೆಸ್ ನಲ್ಲಿ ಅಭಿವೃದಿಪಡಿಸಿರುವ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ನಂತರ ಮಾನತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅಪ್ಡೇಟ್ ಮಾಡುವುದು. ಅದರಲ್ಲಿನ ಮಾಹಿತಿಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣಕ್ಕೆ ಪರಿಗಣಿಸಲಾಗುವುದು.
ಉಪನಿರ್ದೇಶಕರ ಕಛೇರಿಯಲ್ಲಿ ಪ್ರತಿ ಅರ್ಜಿ ಸ್ವೀಕರಿಸಿದ ನಂತರ ನಿಗದಿತ ಅವಧಿಗಿಂತ ಹೆಚ್ಚು ದಿನಗಳು ಲಾಗಿನ್ನಲ್ಲಿ ಬಾಕಿ ಉಳಿಸಿಕೊಳ್ಳುವಂತಿಲ್ಲ. ಉಪನಿರ್ದೇಶಕರು ಅರ್ಜಿಗಳಲ್ಲಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪರಿಶೀಲಿಸಿ ಅಗತ್ಯಾನುಸಾರ ಅಂತಹ ಅರ್ಜಿಗಳನ್ನು ನಿಗದಿಪಡಿಸಿದ ದಿನದೊಳಗಾಗಿ ರೋಲ್ ಬ್ಲಾಕ್ ಮಾಡಿ (DEO ಲಾಗಿನ್ ಗೆ ಬಂದ ದಿನದಿಂದ 05 ದಿನಗಳೊಳಗೆ) ಆಡಳಿತ ಮಂಡಳಿಗೆ ಕಳುಹಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿದಾರರು ಅವಕಾಶ ವಂಚಿತರಾಗುತ್ತಾರೆ. ಆಯಾ ಲಾಗಿನ್ ಸಿಬ್ಬಂದಿ/ಅಧಿಕಾರಿಗಳು ಇದರ ಜವಾಬ್ದಾರಿಯನ್ನು ಅರಿತು ನಿಗದಿತ ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಚ್ಚರಿಕೆ ನೀಡಿದೆ. ಉಲ್ಲೇಖದಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಕಡ್ಡಾಯವಾಗಿ ಪಾಲಿಸಿ ಪ್ರಥಮ ಮಾನತೆ/ಮಾನತೆಯನ್ನು ನವೀಕರಿಸಲು ಸೂಚಿಸಿದೆ. ಒಂದು ವೇಳೆ ಮಾನ್ಯತೆ ನವೀಕರಿಸುವ ಬಗ್ಗೆ ನಿಯಮ ಉಲ್ಲಂಘನೆಯಾದಲ್ಲಿ ಅಥವಾ ಅನಗತ್ಯ ವಿಳಂಬ ಅಥವಾ ಇತರೆ ಆಧಾರದ ಮೇಲೆ ದೂರುಗಳು ಬಂದಲ್ಲಿ ತಮ್ಮ ಮೇಲೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು.
ತಮ್ಮ ಜಿಲ್ಲೆಯ ಯಾವುದೇ ಶಾಲೆಯು ಮಾನ್ಯತೆ ನವೀಕರಿಸದ ಕಾರಣದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೊಂದಾಯಿಸಲು ತೊಂದರೆಯಾದಲ್ಲಿ ಅಥವಾ ಶಾಲೆಗಳು ಅನಧಿಕೃತ ಎಂದು ಪರಿಗಣಿಸಲು ಕಾರಣರಾದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.




