ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. 17 ಕಾಡಾನೆಗಳು ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಸಂಚರಿಸಿವೆ.
17 ಕಾಡಾನೆಗಳ ಹಿಂಡು ಬಿಂದಾಸ್ ಆಗಿ ರಸ್ತೆ ದಾಟಿದೆ. ಮುತ್ತಿನ ಕೊಪ್ಪ, ಶೆಟ್ಟಿ ಕೊಪ್ಪ, ಮಡಬೂರು ಸುತ್ತಮುತ್ತ ಕಾಡಾನೆಗಳು ಓಡಾಡುತ್ತಿವೆ. ಎನ್ಆರ್ ಪುರ ವಲಯ ಅರಣ್ಯ ವ್ಯಾಪ್ತಿಯ ಗ್ರಾಮಗಳು ಇವಾಗಿವೆ. ಅಡಕೆ, ಕಾಫಿ, ಬಾಳೆ ಬೆಳೆಯನ್ನು ಕಾಡಾನೆಗಳು ನಾಶ ಮಾಡುತ್ತಿದ್ದು, ಸೆರೆಹಿಡಿದು ಸ್ಥಳಾಂತರ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರೈತರು, ಗ್ರಾಮಸ್ಥರು ಈ ಕುರಿತಾಗಿ ಒತ್ತಾಯಿಸಿದ್ದಾರೆ.

