ಶಿವಮೊಗ್ಗ : ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27ನೇ ಸಾಲಿಗಾಗಿ ಓರ್ವ ನಿವೃತ್ತ ಸೈನ್ಯಾಧಿಕಾರಿಯನ್ನು ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ ಮಾಜಿ ಸೈನಿಕರನ್ನು 30 ಎನ್.ಸಿ.ಸಿ. ಬೋಧಕರ ಹುದ್ದೆಗಳಿಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ಇಮೇಲ್ “[email protected]“ ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa), KSCMF Building, 4th Floor, No-8, Cunningham Road, Bengaluru – 560001 ಮೂಲಕ ಜ.25 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ “https://nccindia.gov.in“ ಜಾಲತಾಣವನ್ನು ಅಥವಾ ಮೊಬೈಲ್ ಸಂಖ್ಯೆ 9481405092 ನ್ನು ಸಂಪರ್ಕಿಸುವುದು.
ನೀರಿನ ಬಾಕಿ ಕಂದಾಯ ಪಾವತಿಸಲು ವಿಶೇಷ ಕೌಂಟರ್
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2025-26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ಜ. 18 ರಂದು ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ಚಿಕ್ಕಲ್ ಶಿವನ ಪಾರ್ಕ್ ಹತ್ತಿರ, ಗಾಂಧೀನಗರ ಪಾರ್ಕ್ ಹತ್ತಿರ, ವಿನೋಬನಗರ ಕಲ್ಲಹಳ್ಳಿ ಅಭೀಷ್ಟವರ ಗಣಪತಿ ದೇವಸ್ಥಾನದ ಹತ್ತಿರ-ಕೆ.ಹೆಚ್.ಬಿ., ಪರಿಚಯ ಸ್ಟೋರ್ ಎದುರು ಓ.ಟಿ.ರಸ್ತೆ, ಕೃಷಿನಗರ ಗಣಪತಿ ದೇವಸ್ಥಾನದ ಹತ್ತಿರ. ಈ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

