ಮಂಡ್ಯ : ಹೃದಯಾಘಾತದಿಂದ ಮಂಡ್ಯ ಮೂಲದ ಯೋಧ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಚಾಕೋರು ಜಿಲ್ಲೆಯ ಲಾತೂರ್ ಬಿಎಸ್ ಎಫ್ ತರಬೇತಿ ಕೇಂದ್ರದಲ್ಲಿ ನಡೆದಿದೆ.
ಮೃತ ಯೋಧರನ್ನು ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂಬಿ ಮಾದೇಗೌಡ (44) ಎಂದು ಗುರುತಿಸಲಾಗಿದೆ.
2000 ರಲ್ಲಿ ಮಾದೇಗೌಡ ಅವರು ಬಿಎಸ್ ಎಫ್ ಗೆ ನೇಮಕಗೊಂಡಿದ್ದರು. 25 ವರ್ಷದಲ್ಲಿ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿದ್ದರು.
ಈಗಾಗಲೇ ಯೋಧನ ಮೃತದೇಹ ಮಂಡ್ಯಕ್ಕೆ ಆಗಮಿಸಿದ್ದು, ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

