HomeLatest Newsಸಂಕ್ರಾಂತಿ ಸಡಗರ: ಬಾಂಧವ್ಯದ ಬೆಸುಗೆ ಈ ಕುಸುರೆಳ್ಳು ಮನೆಯಲ್ಲೇ ಸುಲಭವಾಗಿ ಮಾಡೋ ವಿಧಾನ ಇಲ್ಲಿದೆ

ಸಂಕ್ರಾಂತಿ ಸಡಗರ: ಬಾಂಧವ್ಯದ ಬೆಸುಗೆ ಈ ಕುಸುರೆಳ್ಳು ಮನೆಯಲ್ಲೇ ಸುಲಭವಾಗಿ ಮಾಡೋ ವಿಧಾನ ಇಲ್ಲಿದೆ

ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಅಂದಾಕ್ಷಣ ನೆನಪಾಗುವುದೇ ಎಳ್ಳು-ಬೆಲ್ಲದ ಸವಿ. ಸುಗ್ಗಿಯ ಸಂಭ್ರಮದ ಜೊತೆಗೆ ಸೂರ್ಯನ ಆರಾಧನೆಯ ಈ ಹಬ್ಬವು ಚಳಿಗಾಲಕ್ಕೆ ವಿದಾಯ ಹೇಳಿ ವಸಂತನ ಆಗಮನವನ್ನು ಸಾರುತ್ತದೆ. ಈ ಹಬ್ಬದ ಅತ್ಯಂತ ಆಕರ್ಷಣೀಯ ಭಾಗವೆಂದರೆ ಅದು ಪಾರಂಪರಿಕ ಕುಸುರೆಳ್ಳುಮಕರ ಸಂಕ್ರಾಂತಿ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು ಮತ್ತು ಕುಸುರೆಳ್ಳು ಕಣ್ಮನ ಸೆಳೆಯುತ್ತವೆ. ಎಳ್ಳು-ಬೆಲ್ಲ ಹಂಚಿ ಶುಭ ಹಾರೈಸುವ ಈ ಹಬ್ಬದಲ್ಲಿ, ಕುಸುರೆಳ್ಳು ತಯಾರಿಸುವುದು ಒಂದು ವಿಶಿಷ್ಟ ಕಲೆ

ಸಂಕ್ರಾಂತಿ ಹಬ್ಬ ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ ಇದು ಬಾಂಧವ್ಯದ ಹಬ್ಬ. ಮುತ್ತಿನಂತಹ ಕುಸುರೆಳ್ಳು ಮತ್ತು ಎಳ್ಳು-ಬೆಲ್ಲವನ್ನು ಸಿದ್ಧಪಡಿಸಿ ನೆರೆಹೊರೆಯವರಿಗೆ, ಸ್ನೇಹಿತರಿಗೆ ಹಂಚುವುದು ನಮ್ಮ ಸಂಸ್ಕೃತಿಯ ಪ್ರತೀಕ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಎಂಬ ನಾಣ್ಣುಡಿಯಂತೆ, ಈ ಸಿಹಿಯು ಮನುಷ್ಯರ ನಡುವೆ ಪ್ರೀತಿ ಮತ್ತು ಉಲ್ಲಾಸವನ್ನು ವೃದ್ಧಿಸುತ್ತದೆ.

ಸಾಮಾನ್ಯವಾಗಿ ನಾವು ಮಾರುಕಟ್ಟೆಯಿಂದ ಸಂಕ್ರಾಂತಿ ಕಾಳುಗಳನ್ನು (Sugar Coated Til) ಖರೀದಿಸುತ್ತೇವೆ. ಮಕ್ಕಳಿಗೆ ಬಹಳ ಪ್ರಿಯವಾದ ಈ ಕುರುಕಲು ತಿಂಡಿ ನಿಮಿಷಗಳಲ್ಲಿ ಖಾಲಿಯಾಗುತ್ತದೆ. ಆದರೆ, ಅಚ್ಚರಿಯ ವಿಷಯವೆಂದರೆ ಇದನ್ನು ಅತ್ಯಂತ ಸುಲಭವಾಗಿ ಮತ್ತು ಶುಚಿಯಾಗಿ ಮನೆಯಲ್ಲೇ ತಯಾರಿಸಬಹುದು.ಈ ರುಚಿ ರುಚಿಯ ಕಾಳುಗಳನ್ನು ತಯಾರಿಸುವುದು ಹೇಗೆ? ಎಷ್ಟು ಸಮಯ ಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಕಾಗುವ ಸಾಮಗ್ರಿಗಳು

ಒಂದು ಕಪ್ ಸಕ್ಕರೆ,

ಒಂದು ಕಪ್ ಹಾಲು,

ಬಿಳಿ ಎಳ್ಳು

ಅಡುಗೆಗೆ ಬಳಸುವ ಕಲರ್ ಪೌಡರ್‌.

ಸಂಕ್ರಾಂತಿ ಕಾಳು ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಬೌಲ್ ಸಕ್ಕರೆ ಮತ್ತು ಅದು ಮುಳುಗುವಷ್ಟು ಮಾತ್ರ ನೀರು ಸೇರಿಸಿ ಒಲೆಯ ಮೇಲಿಡಿ. ಇದಕ್ಕೆ ಅರ್ಧ ಕಪ್ ಹಾಲು ಸೇರಿಸಿ ಮಿಕ್ಸ್ ಮಾಡಿ. ಸಕ್ಕರೆ ಕರಗಿ ಚೆನ್ನಾಗಿ ಕುದಿ ಬಂದಾಗ, ಮೇಲಿರುವ ಕೊಳೆಯನ್ನು ತೆಗೆದು ‘ಒಂದು ಎಳೆ ಪಾಕ’ ಬರುವವರೆಗೆ ಕಾಯಿಸಿ. ಪಾಕ ಸಿದ್ಧವಾದೊಡನೆ ಒಲೆ ಆಫ್ ಮಾಡಿ, ಮತ್ತೊಂದು ಪಾತ್ರೆಗೆ ಸೋಸಿ ಎತ್ತಿಟ್ಟುಕೊಳ್ಳಿ.

ಒಂದು ದಪ್ಪ ತಳದ ಬಾಣಲೆಯಲ್ಲಿ ಬಿಳಿ ಎಳ್ಳನ್ನು ಹಾಕಿ ಸಣ್ಣ ಉರಿಯಲ್ಲಿ ಲಘುವಾಗಿ ಹುರಿಯಿರಿ.

ಈಗ ತಯಾರಿಸಿಟ್ಟ ಸಕ್ಕರೆ ಪಾಕದಿಂದ ಒಂದು ಚಮಚ ಪಾಕವನ್ನು ಎಳ್ಳಿಗೆ ಹಾಕಿ ನಿರಂತರವಾಗಿ ಕೈಯಾಡಿಸಿ.

ತಿರುಗಿಸುತ್ತಾ ಹೋದಂತೆ ಎಳ್ಳು ಪಾಕವನ್ನು ಹೀರಿಕೊಂಡು ಬಿಡಿಬಿಡಿಯಾಗುತ್ತದೆ.

ಬಾಣಲೆ ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳಿ. ಪಾತ್ರೆ ಹೆಚ್ಚು ಕಾಯುತ್ತಿದೆ ಎನಿಸಿದರೆ ಆಗಾಗ ಒಲೆ ಆಫ್ ಮಾಡಿ. ಪಾತ್ರೆ ಬಿಸಿಯಾದರೆ ಸಕ್ಕರೆ ಮತ್ತೆ ಕರಗಲು ಶುರುವಾಗಿ ಕಾಳುಗಳು ಅಂಟಿಕೊಳ್ಳುತ್ತವೆ.

ಇದೇ ರೀತಿ ಒಂದೊಂದೇ ಚಮಚ ಸಕ್ಕರೆ ಪಾಕವನ್ನು ಹಾಕುತ್ತಾ, ಎಳ್ಳನ್ನು ಕೈಯಾಡಿಸುತ್ತಾ ಇರಿ. ಸುಮಾರು 4-5 ನಿಮಿಷಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿ. ನೀವು ಪಾಕ ಹಾಕುತ್ತಾ ಹೋದಂತೆ ಎಳ್ಳಿನ ಗಾತ್ರ ನಿಧಾನವಾಗಿ ದೊಡ್ಡದಾಗುತ್ತಾ, ಮುತ್ತಿನಂತಹ ಆಕಾರ ಪಡೆಯುತ್ತದೆ.

ನಿಮಗೆ ಬಣ್ಣದ ಕಾಳುಗಳು ಬೇಕೆಂದಲ್ಲಿ ಈ ಟ್ರಿಕ್ ಬಳಸಿ:

ಮೂರು ಸಣ್ಣ ಬೌಲ್‌ಗಳಿಗೆ ಸ್ವಲ್ಪ ಸಕ್ಕರೆ ಪಾಕವನ್ನು ಹಾಕಿಕೊಳ್ಳಿ.

ನಿಮಗೆ ಇಷ್ಟವಾದ ಫುಡ್ ಕಲರ್ (ಕೆಂಪು, ಹಸಿರು ಅಥವಾ ಹಳದಿ) ಸೇರಿಸಿ ಮಿಕ್ಸ್ ಮಾಡಿ.

ಸಿದ್ಧಪಡಿಸಿದ ಕೆಲವು ಕಾಳುಗಳನ್ನು ಈ ಬಣ್ಣದ ಪಾಕಕ್ಕೆ ಹಾಕಿ ಅದ್ದಿ ತೆಗೆಯಿರಿ.

ನಂತರ ಈ ಬಣ್ಣದ ಕಾಳುಗಳನ್ನು ಮತ್ತೆ ಬಾಣಲೆಗೆ ಹಾಕಿ ಒಂದು ನಿಮಿಷ ಹುರಿದರೆ, ಸುಂದರವಾದ ಬಣ್ಣದ ಸಂಕ್ರಾಂತಿ ಕಾಳುಗಳು ಸಿದ್ಧ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular