ಆಭರಣ ಪ್ರಿಯರಿಗೆ ವಾರದ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಾಗತಿಕ ರಾಜಕೀಯ ಅನಿಶ್ಚಿತತೆಯ ನಡುವೆ ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇಂದು ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ಎತ್ತರಕ್ಕೆ ಏರಿವೆ.ಬೆಳ್ಳಿ ಬೆಲೆ ಕೂಡ ಚಿನ್ನದ ಹಾದಿಯಲ್ಲೇ ಸಾಗುತ್ತಿದೆ.
ಇಂದು ಬೆಳ್ಳಿಯ ದರದಲ್ಲಿ ಪ್ರತಿ 100 ಗ್ರಾಂಗೆ 10-12 ರೂ. ಏರಿಕೆಯಾಗಿದೆ. ತಮಿಳುನಾಡು ಮತ್ತು ಕೇರಳದ ಕೆಲವೆಡೆ ಪ್ರತಿ 100 ಗ್ರಾಂ ಬೆಳ್ಳಿ ಬೆಲೆ ₹28,700 ತಲುಪಿದ್ದು, ಈ ವಾರದಲ್ಲೇ ₹30,000 ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.24K ಚಿನ್ನದ ಒಂದು ಗ್ರಾಂ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ಪ್ರತೀ ಗ್ರಾಂ ಬೆಲೆ ಇಂದು 114,215 ರೂ. ಆಗಿದ್ದು, ನಿನ್ನೆ 14,046 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹169 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು? (ಜನವರಿ 12, 2026)
22 ಕ್ಯಾರಟ್ (ಆಭರಣ ಚಿನ್ನ): 10 ಗ್ರಾಂಗೆ ₹1,30,300 (₹1.30 ಲಕ್ಷ ದಾಟಿದ ಐತಿಹಾಸಿಕ ಏರಿಕೆ!)
24 ಕ್ಯಾರಟ್ (ಅಪರಂಜಿ ಚಿನ್ನ): 10 ಗ್ರಾಂಗೆ ₹1,42,150
ಬೆಳ್ಳಿ ದರ: ಪ್ರತಿ 100 ಗ್ರಾಂಗೆ ₹27,000 ಆಗಿದೆ.
ಇಂದಿನ ಚಿನ್ನ–ಬೆಳ್ಳಿ ದರ (ಜನವರಿ 12)
24 ಕ್ಯಾರಟ್ (1 ಗ್ರಾಂ): ₹14,215
22 ಕ್ಯಾರಟ್ (1 ಗ್ರಾಂ): ₹13,030
18 ಕ್ಯಾರಟ್ (1 ಗ್ರಾಂ): ₹10,661
ಬೆಳ್ಳಿ (1 ಗ್ರಾಂ): ₹270
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
(1 ಗ್ರಾಂಗೆ | ಜನವರಿ 12)
ಬೆಂಗಳೂರು: ₹13,030
ಚೆನ್ನೈ: ₹13,120
ಮುಂಬೈ: ₹13,030
ದೆಹಲಿ: ₹13,045
ಕೋಲ್ಕತಾ: ₹13,030
ಕೇರಳ: ₹13,030
ಅಹ್ಮದಾಬಾದ್: ₹13,035
ಜೈಪುರ್: ₹13,045
ಲಕ್ನೋ: ₹13,045
ಭುವನೇಶ್ವರ್: ₹13,030

