HomeKarnatakaBREAKING: ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕಾಲೇಜ್ ಪ್ರಾಂಶುಪಾಲ ಸೇರಿ 5 ಲೆಕ್ಚರರ್ಸ್ ವಿರುದ್ಧ...

BREAKING: ಬೆಂಗಳೂರಿನಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕಾಲೇಜ್ ಪ್ರಾಂಶುಪಾಲ ಸೇರಿ 5 ಲೆಕ್ಚರರ್ಸ್ ವಿರುದ್ಧ ಎಫ್ಐಆರ್

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ ಸೇರಿ 5 ಲೆಕ್ಚರರ್ಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಯಶಸ್ವಿನಿಯ ತಾಯಿ ದೂರಿನ ಮೇರೆಗೆ ಸೂರ್ಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯ ಆತ್ಮಹತ್ಯೆಗೆ ಕಾಲೇಜು ಉಪನ್ಯಾಸಕರ ಕಿರುಕುಳವೆಂಬ ಆರೋಪ ಕೇಳಿ ಬಂದಿತ್ತು.

ಸಹಪಾಠಿಗಳ ಮುಂದೆ ಯಶಸ್ವಿನಿ ಬಣ್ಣ ಮತ್ತು ಉಡುಪು ಬಗ್ಗೆ ಟೀಕಿಸಲಾಗಿತ್ತು. ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ ಎಂದು ಟೀಕಿಸಿದ್ದರು. ವಿದ್ಯಾರ್ಥಿನಿ ಯಶಸ್ವಿನಿ ಕಣ್ಣು ನೋವು ಎಂದಿದ್ದಕ್ಕೆ ಕೊಂಕು ಮಾತುಗಳನ್ನಾಡಿದ್ದರು. ಸೆಮಿನಾರ್ ಮತ್ತು ರೇಡಿಯೋಲಜಿ ಕೇಸ್ ನೀಡದೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಇದರಿಂದ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಲೆಕ್ಚರರ್ಸ್ ವಿರುದ್ಧ ಯಶಸ್ವಿನಿಯ ತಾಯಿ ಪರಿಮಳಾ ಕ್ರಮಕ್ಕೆ ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular