ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಹತ್ಯೆಗೈಯ್ಯಲು ಯುವಕ ಸ್ಕೆಚ್ ಹಾಕಿ ಹಾಡಹಗಲೇ ಗನ್ ಹಿಡಿದು ಓಡಾಡುತ್ತಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಮಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವತಿಯ ಹಿಂದೆ ಬಿದ್ದ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. ಆದರೆ ಯುವತಿ ಆತನ ಪ್ರೀತಿ ನಿರಾಕರಿಸಿದ್ದಾಳೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಯುವತಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದಾನೆ. ಇದೇ ಕಾರಣಕ್ಕಾಗಿ ಆನ್ ಲೈನ್ ನಲ್ಲಿ ಗನ್ ಖರೀದಿಸಿದ್ದಾನೆ.
ಯುವತಿಯನ್ನು ಗುಂಡಿಟ್ಟು ಕೊಲ್ಲಲು ಹಾಡಹಗಲೇ ರಸ್ತೆಯಲ್ಲಿ ಗನ್ ಹಿಡಿದು ಓಡಾಡಿದ್ದಾನೆ. ಯುವತಿ ಸಮಯ ಪ್ರಜ್ಞೆ ಮೆರೆದಿದ್ದು, 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾರ ಪೊಲೀಸರು ಯುವಕನ ಜಾಡು ಹಿಡಿದಿದ್ದಾರೆ.
ಗನ್ ಸಮೇತ ಯುವಕನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬಿಹಾರ ಮೂಲದ ಯುವಕನ್ನನ್ನು ಬಂಧಿಸಲಾಗಿದೆ. ಯುವಕ ಗನ್ ಹಿಡಿದು ಓಡಾಡುತ್ತಿರ್ಯ್ವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

