ಬೆಂಗಳೂರು: ಮನರೇಗಾ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಎಂದು ಹೆಸರು ಬದಲಿಸಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಯೋಜನೆ ವಿರೋಧಿಸುತ್ತಿದ್ದಾರಷ್ಟೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನವರದ್ದು ಪ್ರಚಾರಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ವಿರೋಧ. ಓಪನ್ ಡಿಬೆಟ್ ಮಾಡೋಣ. ನಾವೇನೂ ಖುದ್ದು ಹೋಗಲ್ಲ ಪಾಸಿಟಿವ್ ನೆಗೆಟಿವ್ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಕೊಡುತ್ತೇನೆ. ಚರ್ಚೆಯಾಗಲಿ ಎಂದು ಸವಾಲು ಹಾಕಿದ್ದಾರೆ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ. ಹೈಕಮಾಂಡ್ ಹೇಳೋವರೆಗೆ ಇರುತ್ತೇನೆ ಎಂದಿದ್ದಾರೆ. ಮಾಜಿ ಸಿಎಂ ದೇವರಾಜ ಅರಸು ದಾಖಲೆ ಅಂತಾರಲ್ಲ, ಇಂಧಿರಾ ಗಾಂಧಿ ಅವರನ್ನು ಅರಸು ಎದುರು ಹಾಕಿಕೊಂಡಿದ್ರು. ಆದರೆ, ಈಗ ರಾಹುಲ್ ಗಾಂಧಿ ಕಡೆಗೆ ಸಿದ್ದರಾಮಯ್ಯ ನೋಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

