HomeLatest NewsBIG NEWS: ಐಪಿಎಸ್ ಅಧಿಕಾರಿ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್: ವಂಚಕರಿಂದ ಹಣಕ್ಕೆ ಬೇಡಿಕೆ

BIG NEWS: ಐಪಿಎಸ್ ಅಧಿಕಾರಿ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್: ವಂಚಕರಿಂದ ಹಣಕ್ಕೆ ಬೇಡಿಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳ್ಳ ಖದೀಮರಿಗೆ ಪೊಲೀಸರ ಭಯವೂ ಇಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಲ್ಲಿಯೇ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆದು ಹಣಕ್ಕೆ ಬೇಡಿಕೆ ಇಡುವ, ಬೆದರಿಕೆ ಹಾಕುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್.ಎಂ ಹೆಸರಲ್ಲಿ ನಕಲಿ ವಾಟ್ಸಪ್ ಅಕೌಂಟ್ ತೆರೆದು, ವಂಚಕರು ಮೆಸೇಜ್ ಕಳುಹಿಸುವ ಮೂಲಕ ಆನ್ ಲೈನ್ ಮೂಲಕ ವಂಚನೆಗೆ ಯತ್ನಿಸಿರುವ ಘಟನೆ ನಡೆದಿದೆ.

ಐಪಿಎಸ್ ಅಧಿಕಾರಿ ಅಕ್ಷಯ್ ಅವರ ಫೋಟೋ, ಹೆಸರು ಬಳಸಿಕೊಂಡು ಬೇರೆ ನಂಬರ್ ಗಳಿಂದ ಅಕೌಂಟ್ ರಚಿಸಿ ಹಣ ಕೇಳುತ್ತಿದ್ದಾರೆ. ಐಪಿಎಸ್ ಅಧಿಕಾರಿಯ ಸ್ನೇಹಿತರು ಈ ಬಗ್ಗೆ ಅವರ ಗಮನಕ್ಕೆ ತಂದಾಗಲೇ ತನ್ನ ಹೆಸರಲ್ಲಿ ವಂಚಕರು ಈ ರೀತಿ ಕೃತ್ಯವೆಸಗುತ್ತಿರುವ ಸಂಗತಿ ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಷಯ್ ಅವರ ಹೆಸರಲ್ಲಿ, ನನ್ನ ಬ್ಯಾಂಕ್ ವರ್ಗಾವಣೆಯಲ್ಲಿ ಸಮಸ್ಯೆಯಾಗಿದೆ. ತುರ್ತಾಗಿ ಒಂದು ಪ್ರಾಜೆಕ್ಟ್ ಖಾತೆಗೆ ಹಣ ಜಮೆ ಮಾಡಬೇಕು. ಪ್ರಸ್ತುತ ನಾನು ಒಂದು ಮೀಟಿಂಗ್ ನಲ್ಲಿರುವುದರಿಂದ ನೀವು ಹಣ ವರ್ಗಾಯಿಸಲು ಸಾಧ್ಯವೇ? ನೀವು ನೀಡಿದ ಹಣವನ್ನು ಸಂಜೆಯೊಳಗೆ ನಿಮಗೆ ಮರುಪಾವತಿ ಮಾಡುತ್ತೇನೆ ಎಂಬ ಸಂದೇಶ ರವಾನಿಸಲಾಗಿದೆ. ಈಗಾಗಲೇ ಅಕ್ಷಯ್ ಅವರ ಕೆಲ ಸ್ನೇಹಿತರಿಗೆ ಇಂತಹ ಸಂದೇಶಗಳು ಬಂದಿದ್ದು, ವಂಚಕರ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಕ್ಷಯ್ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular