ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಹಿನ್ನೆಲೆಯಲ್ಲಿ 5 ಪಾಲಿಕೆಗಳ ವಾರ್ಡ್ ಗಳ ಮೀಸಲಾತಿ ಪ್ರಕಟವಾಗಿದೆ. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಘೋಷಣಿಸಲಾಗಿದೆ.
5 ಪಾಲಿಕೆಗಳ 369 ವಾರ್ಡ್ ಗಳ ಮೀಸಲಾತಿ ಪ್ರಕಟಗೊಂಡಿದ್ದು, ಎಲ್ಲಾ ವಾರ್ಡ್ ಗಳಲ್ಲಿ ಮಹಿಳೆಯರಿಗೆ. ಪ್ರತಿ ಜಾತಿಯಲ್ಲಿಯೂ 50% ಮೀಸಲಾತಿ ಘೋಷಿಸಲಾಗಿದೆ. ಒಂದು ವೇಳೆ ಆಕ್ಷೇಪಣೆ ಇದ್ದರೆ ಈ ಸಂಬಂಧ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು.
ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಜನವರಿ 23ರವರೆಗೆ ಅವಕಾಶವಿದೆ ಎಂದು ಗ್ರೇಟರ್ ಬೆಂಗಳುರು ಪ್ರಾಧಿಕಾರ ತಿಳಿಸಿದೆ.

