ನೆಮ್ಮದಿಯ ಜೀವನ ಸಾಗಿಸಬೇಕು, ಕುಟುಂಬದವರೆಲ್ಲರೂ ಆರೋಗ್ಯವಂತರಾಗಿರಬೇಕು ಎಂಬುದು ಪ್ರತಿಯೊಬ್ಬರ ಕನಸು. ಈ ಕಾರಣಕ್ಕಾಗಿಯೇ ಬಹುತೇಕರು ಮನೆ ಕಟ್ಟುವಾಗ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ, ಕೇವಲ ವಾಸ್ತು ನೋಡಿ ಮನೆ ಕಟ್ಟಿದರೆ ಸಾಲದು ಯಾವ ದಿಕ್ಕಿನಲ್ಲಿ ಯಾವ ದೇವರು ಇರುತ್ತಾರೆ? ಯಾವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಶುಭ? ಎಂಬ ಅರಿವು ಕೂಡ ಮುಖ್ಯವಾಗಿರುತ್ತದೆ. ಪಂಚತತ್ವಗಳ ಆಧಾರದ ಮೇಲೆ ರೂಪಿಸಲಾದ ವೇದಿಕ್ ವಾಸ್ತುವಿನ ಪ್ರಮುಖ ಅಂಶಗಳು ಇಲ್ಲಿವೆ:
ವಾಸ್ತು ಎಂಬುದು ಅನಾದಿ ಕಾಲದಿಂದಲೂ ಪಾಲನೆ ಮಾಡುತ್ತಾರೆ. ಗ್ರಹಗಳು, ಪಂಚತತ್ವಗಳ ಆಧಾರದ ಮೇಲೆ ವಾಸ್ತು ಸೃಷ್ಟಿಸಲಾಗಿದೆ. ಅದರಲ್ಲೂ ವೇದಿಕ್ ವಾಸ್ತುವನ್ನು ಅನಾದಿ ಕಾಲದಿಂದಲು ಪಾಲನೆ ಮಾಡುತ್ತಿದ್ದಾರೆ. ವೇದಿಕ್ ವಾಸ್ತು ಪ್ರಕಾರ ಮನೆಯ ಯಾವ ದಿಕ್ಕಿನಲ್ಲಿ ಏನಿರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಹೀಗೆ ಮಾಡುವುದರಿಂದ ಮನೆ ಮಂದಿಯಲ್ಲಾ ಸಂತಸವಾಗಿರುತ್ತಾರೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಓದಿಗೆ ಪೂರಕವಾದ ಈ ಮೂರು ದಿಕ್ಕುಗಳು ಶ್ರೇಷ್ಠ:
1.ಈಶಾನ್ಯ ದಿಕ್ಕು (North-East): ಜ್ಞಾನದ ಉದಯ ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ದಿಕ್ಕನ್ನು ಅತ್ಯಂತ ಪವಿತ್ರ ಎನ್ನಲಾಗುತ್ತದೆ. ಇಲ್ಲಿ ಈಶಾನ ದೇವರು ನೆಲೆಸಿರುತ್ತಾರೆ.ಇದು ಜಲ ತತ್ವದ ಜಾಗವಾಗಿದ್ದು, ರಚನಾತ್ಮಕ ಗುಣಗಳನ್ನು ಹೆಚ್ಚಿಸುತ್ತದೆ.ಇಲ್ಲಿ ಕುಳಿತು ಓದಿದರೆ ಮಕ್ಕಳಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ ಮತ್ತು ಕಲಿಕೆಯ ಶಕ್ತಿ ವೃದ್ಧಿಸುತ್ತದೆ.
2.ಪೂರ್ವ ದಿಕ್ಕು (East): ಸೂರ್ಯನ ಶಕ್ತಿ ಸೂರ್ಯ ದೇವನ ಆಳ್ವಿಕೆಯ ಈ ದಿಕ್ಕು ಆರೋಗ್ಯ ಮತ್ತು ಬೆಳವಣಿಗೆಯ ಸಂಕೇತ.ಸೂರ್ಯನ ಕಿರಣಗಳು ನೇರವಾಗಿ ಬೀಳುವ ದಿಕ್ಕಾದ್ದರಿಂದ ಇಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ.ಇಲ್ಲಿ ಓದುವ ಕೋಣೆ ಇದ್ದರೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ ಮತ್ತು ನೆನಪಿನ ಶಕ್ತಿ ಚುರುಕಾಗುತ್ತದೆ.
3.ಉತ್ತರ ದಿಕ್ಕು (North): ಕುಬೇರನ ಕೃಪೆ ಇದು ಸಂಪತ್ತಿನ ಅಧಿಪತಿ ಕುಬೇರನ ದಿಕ್ಕು. ಬುಧ ಗ್ರಹದ ಪ್ರಭಾವವಿರುವ ಈ ಜಾಗವು ಬುದ್ಧಿವಂತಿಕೆಯನ್ನು ನಿಯಂತ್ರಿಸುತ್ತದೆ.ಪ್ರಾಪಂಚಿಕ ಜ್ಞಾನ ಹೆಚ್ಚಿಸಲು ಈ ದಿಕ್ಕು ಸಹಕಾರಿ.ಇಲ್ಲಿ ಕುಳಿತು ಓದಿದರೆ ಓದಿದ ವಿಷಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ದಾರಿಯಾಗುತ್ತದೆ.
ಸ್ಟಡಿ ರೂಮ್ಗಾಗಿ ಕೆಲವು ‘ಸ್ಮಾರ್ಟ್’ ಟಿಪ್ಸ್:
ಮಕ್ಕಳು ಓದಲು ಕುಳಿತಾಗ ಅವರ ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರುವುದು ಅತ್ಯಂತ ಶ್ರೇಷ್ಠ.
ಓದುವ ಕೋಣೆಯ ಗೋಡೆಗಳಿಗೆ ತಿಳಿ ಹಸಿರು, ಹಳದಿ ಅಥವಾ ಬಿಳಿ ಬಣ್ಣವಿರಲಿ. ಇದು ಮನಸ್ಸನ್ನು ಪ್ರಶಾಂತವಾಗಿರಿಸುತ್ತದೆ.
ಓದುವ ಟೇಬಲ್ ಮೇಲೆ ಹೆಚ್ಚು ಪುಸ್ತಕಗಳನ್ನು ಗುಡ್ಡೆ ಹಾಕಬೇಡಿ. ಅದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಕೇವಲ ಅಗತ್ಯವಿರುವ ಪುಸ್ತಕಗಳು ಮಾತ್ರ ಇರಲಿ.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮದ ಜೊತೆಗೆ ಮನೆಯ ಪರಿಸರವೂ ಮುಖ್ಯ. ದಿಕ್ಕುಗಳ ಸರಿಯಾದ ಅರಿವು ಮಕ್ಕಳ ಓದಿನ ಹಾದಿಯನ್ನು ಸುಲಭಗೊಳಿಸಬಹುದು

