ಬೆಂಗಳೂರು: ಪಿಜ್ಜಾ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ‘ಥಟ್’ ಅಂತ ಬರೋ ಹೆಸರು ಡೊಮಿನೋಸ್ (Domino’s). ಹಳ್ಳಿ ಕಡೆಯಿಂದ ಹಿಡಿದು ಸಿಟಿವರೆಗೂ ಈ ಬ್ರ್ಯಾಂಡ್ ತನ್ನ ಸಾಮ್ರಾಜ್ಯ ವಿಸ್ತರಿಸಿದೆ. ಫಾಸ್ಟ್ ಡೆಲಿವರಿ ಮತ್ತು ಬಾಯಲ್ಲಿ ನೀರೂರಿಸೋ ಟೇಸ್ಟ್‌ನಿಂದಾಗಿ ಇದೊಂದು ಪವರ್‌ಫುಲ್ ಬ್ರ್ಯಾಂಡ್ ಆಗಿ ಬೆಳೆದಿದೆ.
ಈಗ ಇದೇ ಬ್ರ್ಯಾಂಡ್ ಹೆಸರಲ್ಲಿ ದುಡ್ಡು ಮಾಡಲು ಉದ್ಯಮಿಗಳು ಕ್ಯೂ ನಿಂತಿದ್ದಾರೆ,ಪೆಪ್ಪಿ ಪನ್ನೀರ್ ಮತ್ತು ಅಚಾರಿ ದೋ ಪ್ಯಾಜಾದಂತಹ ಲೋಕಲ್ ರುಚಿಗಳನ್ನು ಪರಿಚಯಿಸಿ ಭಾರತೀಯರ ನಾಲಿಗೆಗೆ ರುಚಿ ಹಚ್ಚಿದ ಈ ಸಂಸ್ಥೆ, ಈಗ ದೇಶಾದ್ಯಂತ 1,500ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ ಬೃಹತ್ ಉದ್ಯಮವಾಗಿದೆ.
ಫಾಸ್ಟ್ ಡೆಲಿವರಿ ಮತ್ತು ಸಖತ್ ಟೇಸ್ಟ್‌ನಿಂದ ಪವರ್‌ಫುಲ್ ಬ್ರ್ಯಾಂಡ್ ಆಗಿ ಬೆಳೆದಿರೋ ಡೊಮಿನೋಸ್ ಜೊತೆ ಕೈಜೋಡಿಸಿ ದುಡ್ಡು ಮಾಡಲು ಉದ್ಯಮಿಗಳು ಈಗ ಕ್ಯೂ ನಿಂತಿದ್ದಾರೆ. ಹಾಗಾದ್ರೆ ಈ ಫಾಸ್ಟ್ ಫುಡ್ ಭಾಗವಾಗೋದು ಹೇಗೆ? ನಿಮ್ಮ ಜೇಬಲ್ಲಿ ಎಷ್ಟು ಕಾಸಿರಬೇಕು? ಬಿಸಿನೆಸ್ ಪ್ಲ್ಯಾನ್ ಏನು?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
ನೀವೂ ಡೊಮಿನೋಸ್ ಮಾಲೀಕರಾಗಬೇಕೆಂಬ ಕನಸು ಕಂಡಿದ್ದರೆ, ಮೊದಲು ಈ ಮಾಸ್ಟರ್ ಪ್ಲ್ಯಾನ್ ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ಡೊಮಿನೋಸ್ ನೇರವಾಗಿ ಯಾರಿಗೂ ಫ್ರಾಂಚೈಸಿ ಹಂಚುವುದಿಲ್ಲ ಬದಲಿಗೆ, ಜ್ಯುಬಿಲೆಂಟ್ ಫುಡ್‌ವರ್ಕ್ಸ್ (Jubilant FoodWorks) ಸಂಸ್ಥೆಯು ಇಲ್ಲಿನ ಸಂಪೂರ್ಣ ಉಸ್ತುವಾರಿಯನ್ನು ಹೊತ್ತಿರುವ ‘ಮಾಸ್ಟರ್ ಫ್ರಾಂಚೈಸಿ’. ನೀವು ಇವರಿಂದ ಮೂರು ವಿಧದ ಬ್ಯುಸಿನೆಸ್ ಮಾಡೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು:
ಸಾಂಪ್ರದಾಯಿಕ ಮಾದರಿ (Traditional Model): ಪಕ್ಕಾ ಫ್ಯಾಮಿಲಿ ರೆಸ್ಟೋರೆಂಟ್ ಇದು ನಾವು ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ನೋಡುವ ದೊಡ್ಡ ರೆಸ್ಟೋರೆಂಟ್‌ಗಳು. ಇಲ್ಲಿ ವಿಶಾಲವಾದ ಜಾಗವಿರುತ್ತದೆ, ಗ್ರಾಹಕರು ಬಂದು ಫ್ಯಾಮಿಲಿ ಜೊತೆ ಕುಳಿತು ತಿನ್ನಬಹುದು (Dine-in). ಅದರ ಜೊತೆಗೆ ಹೋಮ್ ಡೆಲಿವರಿ ಸೌಲಭ್ಯವೂ ಇಲ್ಲಿ ಲಭ್ಯವಿರುತ್ತದೆ.
ಸಂಪ್ರದಾಯೇತರ ಮಾದರಿ (Non-Traditional Model): ಕ್ವಿಕ್ ಸರ್ವಿಸ್ ಸೆಂಟರ್ ಈ ಮಾದರಿಯು ಹೆಚ್ಚಾಗಿ ಮಾಲ್‌ಗಳು, ವಿಮಾನ ನಿಲ್ದಾಣಗಳು ಅಥವಾ ಬಿಜಿ ಇರುವ ರೈಲ್ವೇ ನಿಲ್ದಾಣಗಳಲ್ಲಿ ಕಂಡುಬರುತ್ತದೆ. ಇಲ್ಲಿ ಕುಳಿತು ತಿನ್ನಲು ಹೆಚ್ಚು ಜಾಗವಿರುವುದಿಲ್ಲ. ಬದಲಿಗೆ ಪಾರ್ಸಲ್ ಒಯ್ಯುವ (Takeaway) ಮತ್ತು ಹತ್ತಿರದ ಜಾಗಗಳಿಗೆ ಡೆಲಿವರಿ ಕೊಡುವ ಉದ್ದೇಶದಿಂದ ಈ ಸಣ್ಣ ಮಳಿಗೆಗಳನ್ನು ನಡೆಸಲಾಗುತ್ತದೆ.
ಟ್ರಾನ್ಸಿಶನಲ್ ಮಾದರಿ (Transitional Model): ಸ್ಮಾರ್ಟ್ ಹೈಬ್ರಿಡ್ ಸೆಟಪ್ ಇದು ಮೇಲೆ ತಿಳಿಸಿದ ಎರಡೂ ಮಾದರಿಗಳ ಮಿಶ್ರಣ. ಇಲ್ಲಿ ಡೆಲಿವರಿ ಮತ್ತು ಟೇಕ್‌ಅವೇಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೂ, ಬರುವ ಗ್ರಾಹಕರಿಗಾಗಿ ಸಣ್ಣ ಪ್ರಮಾಣದ ಕುಳಿತು ತಿನ್ನುವ ವ್ಯವಸ್ಥೆ ಇರುತ್ತದೆ. ಇದು ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ತರುವ ಮಾಡೆಲ್ ಆಗಿದೆ.
ಹೂಡಿಕೆ ಎಷ್ಟು? ಜೇಬಲ್ಲಿರಲಿ ಇಷ್ಟು ಬಂಡವಾಳ
ಒಂದು ಅಂದಾಜಿನ ಪ್ರಕಾರ,ಚಿಕ್ಕ ಔಟ್‌ಲೆಟ್ ಮಾಡುವುದಾದರೆ 30 ರಿಂದ 60 ಲಕ್ಷ ರೂಪಾಯಿ ಬೇಕಾಗಬಹುದು.ದೊಡ್ಡ ರೆಸ್ಟೋರೆಂಟ್ ಮಾಡುವುದಾದರೆ ಅದು 1.5 ಕೋಟಿ ರೂಪಾಯಿವರೆಗೂ ಹೋಗಬಹುದು. 800 ರಿಂದ 2,000 ಚದರ ಅಡಿ ಜಾಗದ ಅವಶ್ಯಕತೆ ಇರುತ್ತದೆ. ಮಾಲ್, ಕಾಲೇಜು, ಐಟಿ ಪಾರ್ಕ್ ಅಥವಾ ಜನಜಂಗುಳಿ ಇರೋ ಕಡೆ ಅಂಗಡಿ ಇದ್ರೆ ತಿಂಗಳಿಗೆ 8 ಲಕ್ಷದಿಂದ 35 ಲಕ್ಷದವರೆಗೂ ವಹಿವಾಟು ನಡೆಸಬಹುದು. ಮೆಟ್ರೋ ಸಿಟಿಗಳಲ್ಲಂತೂ ಪಿಜ್ಜಾ ಕ್ರೇಜ್ ಯಾವತ್ತೂ ಕಮ್ಮಿ ಆಗಲ್ಲ.
ಲಾಭ ಎಷ್ಟು? ಕೈಗೆ ಎಷ್ಟು ಸಿಗುತ್ತೆ?
ಎಲ್ಲಾ ಖರ್ಚು, ಸಂಬಳ, ಬಾಡಿಗೆ ಕಳೆದು ಸಾಮಾನ್ಯವಾಗಿ ಶೇ. 15 ರಿಂದ 25 ರಷ್ಟು ನಿವ್ವಳ ಲಾಭ ಉಳಿಯುತ್ತೆ. ಅಂದ್ರೆ ತಿಂಗಳಿಗೆ ಆರಾಮಾಗಿ 3 ರಿಂದ 5 ಲಕ್ಷ ರೂಪಾಯಿ ನಿಮ್ಮ ಜೇಬಿಗೆ ಉಳಿಯಬಹುದು. ಕೆಲವು ಫೇಮಸ್ ಔಟ್‌ಲೆಟ್‌ಗಳು ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಲಾಭ ಮಾಡಿದ ಉದಾಹರಣೆಗಳೂ ಇವೆ.
ಬೇಕಾಗುವ ದಾಖಲೆಗಳು (Documents Required):
ಫ್ರಾಂಚೈಸಿ ಅರ್ಜಿಗೆ ಈ ಕೆಳಗಿನ ದಾಖಲೆಗಳು ಅತ್ಯಗತ್ಯ:
ಬಿಜಿನೆಸ್ ಮತ್ತು ಜಿಎಸ್‌ಟಿ (GST) ನೋಂದಣಿ.
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್.
FSSAI ಪ್ರಮಾಣಪತ್ರ (ಆಹಾರ ಸುರಕ್ಷತೆ).
ಅಗ್ನಿಶಾಮಕ ಸುರಕ್ಷತೆ (Fire Safety) ಪ್ರಮಾಣಪತ್ರ ಮತ್ತು ಟ್ರೇಡ್‌ಮಾರ್ಕ್ ಲೈಸೆನ್ಸ್.
ಅರ್ಜಿ ಸಲ್ಲಿಸೋದು ಹೇಗೆ?
ನೀವು ಈ ಉದ್ಯಮಕ್ಕೆ ರೆಡಿಯಾಗಿದ್ದರೆ ನೇರವಾಗಿ ಜ್ಯುಬಿಲೆಂಟ್ ಫುಡ್‌ವರ್ಕ್ಸ್‌ನ ಅಧಿಕೃತ ಇಮೇಲ್ ([email protected]) ಮೂಲಕ ಸಂಪರ್ಕಿಸಬಹುದು. ದಾಖಲೆಗಳ ಪರಿಶೀಲನೆ ಮತ್ತು ಸ್ಥಳದ ತಪಾಸಣೆಯ ನಂತರವಷ್ಟೇ ಕಂಪನಿ ನಿಮಗೆ ಹಸಿರು ನಿಶಾನೆ ತೋರಿಸುತ್ತದೆ
ಮೊದಲಿಗೆ ಜ್ಯುಬಿಲೆಂಟ್ ಫುಡ್‌ವರ್ಕ್ಸ್ ಸಂಸ್ಥೆಗೆ ಇಮೇಲ್ ಮೂಲಕ ನಿಮ್ಮ ಆಸಕ್ತಿಯನ್ನು ತಿಳಿಸಿ.
ಇಮೇಲ್ ವಿಳಾಸ: [email protected]
ಕಂಪನಿಯಿಂದ ಪ್ರತಿಕ್ರಿಯೆ ಬಂದ ನಂತರ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಕಂಪನಿಯ ಫ್ರಾಂಚೈಸಿ ತಂಡವು ನಿಮ್ಮ ಜಾಗ ಮತ್ತು ಅದರ ಸುತ್ತಮುತ್ತಲಿನ ಮಾರುಕಟ್ಟೆಯನ್ನು ಪರಿಶೀಲಿಸುತ್ತದೆ.
ಎಲ್ಲವೂ ಸರಿಯಾಗಿದ್ದರೆ, ಫ್ರಾಂಚೈಸಿ ಒಪ್ಪಂದಕ್ಕೆ ಸಹಿ ಹಾಕಿ, ನಿಗದಿತ ಫ್ರಾಂಚೈಸಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಒಪ್ಪಂದ ಮುಗಿದ ನಂತರ, ಡೊಮಿನೋಸ್ ತಂಡವು ನಿಮಗೆ ಸ್ಟಾಫ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್ ಮತ್ತು ಸ್ಟೋರ್ ಸೆಟಪ್‌ನಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ.

