HomeLatest Newsಅಪಘಾತ, ಸಾರಿಗೆ ನಿಯಮ ಉಲ್ಲಂಘನೆ ತಡೆಗೆ ರಾಜ್ಯಾದ್ಯಂತ ರಸ್ತೆ ಸುರಕ್ಷತೆಗಾಗಿ ಎಐ ಆಧಾರಿತ ಕ್ಯಾಮೆರಾ ಅಳವಡಿಕೆ

ಅಪಘಾತ, ಸಾರಿಗೆ ನಿಯಮ ಉಲ್ಲಂಘನೆ ತಡೆಗೆ ರಾಜ್ಯಾದ್ಯಂತ ರಸ್ತೆ ಸುರಕ್ಷತೆಗಾಗಿ ಎಐ ಆಧಾರಿತ ಕ್ಯಾಮೆರಾ ಅಳವಡಿಕೆ

ಬೆಂಗಳೂರು: ಬೆಂಗಳೂರು ಹೊರತಾಗಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅಪಘಾತ ಮತ್ತು ಸಾರಿಗೆ ನಿಯಮ ಉಲ್ಲಂಘನೆ ಹೆಚ್ಚಾಗಿರುವ ರಸ್ತೆಗಳಲ್ಲಿ ರಸ್ತೆ ಸುರಕ್ಷತೆಗೆ ಕೃತಕ ಬುದ್ಧಿಮತ್ತೆ(ಎಐ) ಸ್ಮಾರ್ಟ್ ಎನ್ ಫೋರ್ಸ್ ಮೆಂಟ್ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿದ ರಾಜ್ಯದ 60 ರಸ್ತೆಗಳಲ್ಲಿ ಅಪಘಾತ ತಡೆಗೆ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಧಾರವಾಡ, ದಾವಣಗೆರೆ, ಬೆಳಗಾವಿ, ಕಲಬುರಗಿ, ವಿಜಯನಗರ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೇರಿದ ರಸ್ತೆಗಳಲ್ಲಿ ಎಐ ಆಧಾರಿತ ಸ್ಮಾರ್ಟ್ ಕ್ಯಾಮೆರಾ ಅಳವಡಿಸಲಾಗುವುದು .

ಈ ಕ್ಯಾಮೆರಾಗಳು ವಾಹನಗಳು ನಿಯಮ ಉಲ್ಲಂಘಿಸಿದಲ್ಲಿ ಅದರ ವಿಡಿಯೋ ಮತ್ತು ಫೋಟೋ ಸೆರೆ ಹಿಡಿದು ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುತ್ತವೆ. ಅದರ ಆಧಾರದಲ್ಲಿ ವಾಹನಗಳ ವಿರುದ್ಧ ಸ್ವಯಂ ಚಾಲಿತ ಡಿಜಿಟಲ್ ಚಲನ್ ಸಿದ್ದಪಡಿಸಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ರವಾನಿಸಲಾಗುತ್ತದೆ. ವಿಡಿಯೋ ಮತ್ತು ಫೋಟೋವನ್ನು ಕೂಡ ದಾಖಲೆ ರೂಪದಲ್ಲಿ ಕಳುಹಿಸಲಾಗುವುದು. ದಂಡವನ್ನು ಆನ್ಲೈನ್ ಮೂಲಕ ಪಾವತಿಸಲು ಅವಕಾಶ ನೀಡಲಾಗುವುದು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular