HomeLatest NewsBIG NEWS: ರಾಜ್ಯದಲ್ಲಿ ವನ್ಯಜೀವಿ ಸಂಘರ್ಷ ತಡೆಗೆ ಮಹತ್ವದ ಕ್ರಮ: ಎಐ ಕ್ಯಾಮರಾ ಸೇರಿ ಅತ್ಯಾಧುನಿಕ...

BIG NEWS: ರಾಜ್ಯದಲ್ಲಿ ವನ್ಯಜೀವಿ ಸಂಘರ್ಷ ತಡೆಗೆ ಮಹತ್ವದ ಕ್ರಮ: ಎಐ ಕ್ಯಾಮರಾ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ.

ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳ ಆರಂಭಿಸಲಾಗಿದೆ.

ಎಐ ಕ್ಯಾಮರಾ ಮತ್ತು ಏರಿಯಲ್ ಚಿತ್ರಗಳ ಆಧಾರದಲ್ಲಿ ವನ್ಯಜೀವಿಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಲಿವೆ. ಸಿಬ್ಬಂದಿಯ ಕಾರ್ಯಾಚರಣೆ ವೇಳೆಯೂ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಡಿಯೊ ಕಾಲ‌ರ್ ಅಳವಡಿಸಿದ ಆನೆಗಳ ಮೇಲೆ ನಿಗಾ ಇರಿಸಲಿವೆ. ಅವುಗಳ ಚಲನವಲನ ಕುರಿತಾಗಿ ಸಂಬಂಧಿತ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ.

ಮಾನವ-ವನ್ಯಜೀವಿ ಸಂಘರ್ಷದ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ಸದಾ ನಿಗಾ ಇರಿಸಲಾಗಿರುತ್ತದೆ. ಅಗತ್ಯ ಎದುರಾದಲ್ಲಿ ಕ್ಷಿಪ್ರ ಕಾರ್ಯಾಚರಣೆ ತ೦ಡವನ್ನು ರಚಿಸಲಾಗುತ್ತದೆ.

ಜಿಪಿಎಸ್‌ ಆಧಾರಿತ ಗಸ್ತು ಪಡೆಗಳ ಸಂಪರ್ಕದಲ್ಲಿದ್ದು, ಸಾರ್ವಜನಿಕರಿಂದ ದೂರು ಬ೦ದೊಡನೆ ಗಸ್ತು ಪಡೆಗಳಿಗೆ ನಿರ್ದೇಶನ ಹೋಗಲಿದೆ. ಗಸ್ತು ಪಡೆಗಳಿಗೆ ಎಐ ಕ್ಯಾಮೆರಾ ಆಧಾರಿತ ಚಿತ್ರ ಮತ್ತು ಮಾಹಿತಿಗಳನ್ನು ಒದಗಿಸಲಾಗುತ್ತದೆ.

ಸೌರ ಬೇಲಿ, ರೈಲು ಕಂಬಿ ಬೇಲಿ, ಆನೆ ತಡೆ ಕಂದಕಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಿರಲಿವೆ. ಇವುಗಳ ಬಳಿ ವನ್ಯಜೀವಿಗಳು ಸುಳಿದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ತ೦ಡಕ್ಕೆ ಮಾಹಿತಿ ರವಾನೆಯಾಗಲಿದೆ.

ಮೇಲಿನ ಎಲ್ಲ ಸಂದರ್ಭದಲ್ಲೂ ಸಂಬಂಧಿತ ಪ್ರದೇಶದ ಸಾರ್ವಜನಿಕರಿಗೆ ಮಾಹಿತಿ ಮತ್ತು ಮುನ್ನೆಚ್ಚರಿಕೆ ಸೂಚನೆಗಳು ರವಾನೆಯಾಗಲಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular