HomeKarnatakaBREAKING: ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸದ ವೇಳೆ ಭಾರಿ ಹೈಡ್ರಾಮಾ: ಕೇಂದ್ರ ಸಚಿವರ ಎದುರೇ ಕುರ್ಚಿ...

BREAKING: ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸದ ವೇಳೆ ಭಾರಿ ಹೈಡ್ರಾಮಾ: ಕೇಂದ್ರ ಸಚಿವರ ಎದುರೇ ಕುರ್ಚಿ ಎಸೆದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಕೊಪ್ಪಳ: ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲನ್ಯಾಸದ ವೇಳೆ ಶಿಷ್ಠಾಚಾರ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿರುವ ಘಟನೆ ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದಿದೆ.

ಶಿಷ್ಟಾಚಾರ ಉಲ್ಲಾಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ವಿ.ಸೋಮಣ್ಣ ಎದುರೇ ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಹೆಸರಿಲ್ಲ ಎಂದು ಕಿಡಿಕಾರಿ ರಂಪಾಟ ನಡೆಸಿದ್ದಾರೆ. ಕೇಂದ್ರ ಸಚಿವ ಸೋಮಣ್ಣ ಮೇಲೂ ಕುರ್ಚ್ಚಿ ತೂರಿದ್ದಾರೆ. ಈ ವೇಳೆ ಅಂಗರಕ್ಷಕರು ತಡೆದಿದ್ದಾರೆ.

ಇದರಿಂದಾಗಿ ಕೆಲ ಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ, ಯಾವುದೇ ಶಿಷ್ಟಾಚಾರ ಉಲ್ಲಾಂಘನೆಯಾಗಿಲ್ಲ. ಆದರೂ ಯಾಕೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ ಗೊತ್ತಿಲ್ಲ. ಎಲ್ಲರ ಹೆಸರೂ ಆಮಂತ್ರಣ ಪತ್ರಿಕೆಯಲ್ಲಿದೆ. 27 ಕೋಟಿ ವೆಚ್ಚದ ಹಿಟ್ನಾಳ್, ಮುನಿರಾಬಾದ್, ಗಿಣಗೇರಾ ಮೇಲ್ಸೆತುವೆ ಕಾಮಗಾರಿ ಸಂಪೂರ್ಣ ಕೇಂದ್ರ ಸರ್ಕಾರದ ಹಣದಲ್ಲಿ ನಡೆಯಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular