ಮಂಡ್ಯ :ಕನ್ನಡದ ‘ ತಿಥಿ’ ಸಿನಿಮಾ ಖ್ಯಾತಿಯ ಹಿರಿಯ ನಟ ‘ಸೆಂಚೂರಿ ಗೌಡ’ ಇಂದು ನಿಧನರಾಗಿದ್ದಾರೆ. ಅವರು ನಿನ್ನೆ ರಾತ್ರಿ ಸಿಂಗರೇಗೌಡನ ಕೊಪ್ಪಲು ಗ್ರಾಮದಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲಿನಲ್ಲಿ ಸಿಂಗಾರಿ ಗೌಡ (ಸೆಂಚೂರಿ ಗೌಡ) ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
ಇಂದು ಸಂಗ್ರೇಗೌಡನ ಕೊಪ್ಪಲಿನಲ್ಲಿ ಸೆಂಚುರಿ ಗೌಡರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿದೆ. ತಿಥಿ ಸಿನಿಮಾದ ಮೂಲಕ ಸಿಂಗಾರಿ ಗೌಡ ಅಲಿಯಾಸ್ ಸೆಂಚೂರಿ ಗೌಡ ಜನಪ್ರಿಯರಾಗಿದ್ದರು.
ತಿಥಿ’ ಸಿನಿಮಾ ಖ್ಯಾತಿಯ ‘ಸೆಂಚೂರಿ ಗೌಡ’ (Century Gowda) ನಿಜವಾದ ಹೆಸರು ಸಿಂಗಾರಿ ಗೌಡ (Singari Gowda) (ಮಂಡ್ಯ ಜಿಲ್ಲೆಯವರು) ಸಿಂಗ್ರಿ ಗೌಡ ಅವರೇ ‘ಸೆಂಚೂರಿ ಗೌಡ’ ಪಾತ್ರಧಾರಿಯಾಗಿದ್ದರು, ಇತ್ತೀಚೆಗೆ ‘ಗಡ್ಡಪ್ಪ’ ಖ್ಯಾತಿಯ ನಟ ಚನ್ನೇಗೌಡ ನಿಧನರಾಗಿದ್ದರು. ಇವರಿಬ್ಬರೂ ‘ತಿಥಿ’ ಚಿತ್ರದಲ್ಲಿ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದರು. ಸಹಜ ನಟನೆಯಿಂದ ‘ತಿಥಿ’ ಸಿನಿಮಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು.ಇವರು `ಹಾಲು ತುಪ್ಪ’, `ಚಿನ್ನದ ಗೊಂಬೆ’ ,`ಹಳ್ಳಿ ಪಂಚಾಯಿತಿ’ ,`ತರ್ಲೆ ವಿಲೇಜ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

