HomeLatest Newsಆತ್ಮಹತ್ಯೆಗೆ ಯತ್ನಿಸಿದ್ದ SP ಪವನ್ ನಜ್ಜೂರ್ ಬರೆದಿಟ್ಟಿದ್ದ ಡೆತ್ ನೋಟ್ ಬಹಿರಂಗಪಡಿಸಲಿ: ಕೇಂದ್ರ ಸಚಿವೆ ಶೋಭಾ...

ಆತ್ಮಹತ್ಯೆಗೆ ಯತ್ನಿಸಿದ್ದ SP ಪವನ್ ನಜ್ಜೂರ್ ಬರೆದಿಟ್ಟಿದ್ದ ಡೆತ್ ನೋಟ್ ಬಹಿರಂಗಪಡಿಸಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಸಸ್ಪೆಂಡ್ ಆಗಿರುವ ಬಳ್ಳಾರಿ ಎಸ್ ಪಿ ಪವನ್ ನಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರ ಆ ಡೆತ್ ನೋಟ್ ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರ ಪವನ್ ನಜ್ಜೂರ್ ಅವರ ಡೆತ್ ನೋಟ್ ಮುಚ್ಚಿಟ್ಟಿದೆ. ಅಧಿಕಾರಿಗಳು ನಿನ್ನೆ ಪವನ್ ನಜ್ಜೂರ್ ಬರೆದಿದ್ದ ಡೆತ್ ನೋಟ್ ಕೈಯಲ್ಲಿ ಮುಚ್ಚಿಟ್ಟುಕೊಂಡು ಮಾತನಾಡಿದ್ದರು. ಅದರಲ್ಲಿ ಏನಿದೆ ಎಂದು ಮೊದಲು ಬಹಿರಂಗಪಡಿಸಬೇಕು ಎಂದರು.

ನಮಗೆ ಬಂದಿರುವ ಮಾಹಿತಿ ಪ್ರಕಾರ ಡೆತ್ ನೋಟ್ ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿದೆ. ಡೆತ್ ನೋಟ್ ನಲ್ಲಿ ಏನಿದೆ? ಸರ್ಕಾರ ಯಾಕೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ? ಎಂಬುದು ಗೊತ್ತಾಗಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಶೋಭಾ ಕರಂದ್ಲಾಜೆ, ಬಳ್ಳಾರಿ ಗಲಾಟೆ ವೇಳೆ ನಾನು ಕರೆ ಮಾಡಿದಾಗ ಎಸ್ ಪಿ ಪವನ್ ನಜ್ಜೂರ್ ಯಾವ ಪರಿಸ್ಥಿತಿಯಲ್ಲಿದ್ದರು ಎಂದು ನನಗೆ ಗೊತ್ತು ಎಂದು ಹೇಳಿದ್ದಾರೆ. ಯಾವ ಪರಿಸ್ಥಿತಿ? ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಸ್ಥಿತಿಗೆ ತಂದಿದ್ದೀರಾ? ಕಾಂಗ್ರೆಸ್ ನಾಯಕರು ಗೂಂಡಾ ಆಡಳಿತ ನಡೆಸುತ್ತಿದ್ದಾರೆ. ಬಳ್ಳಾರಿಯನ್ನು ಏನು ಮಾಡಲು ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular