HomeLatest Newsವಾಯು ದಾಳಿ ನಡೆಸಿ ವೆನಿಜುವೆಲಾ ಅಧ್ಯಕ್ಷ, ಪತ್ನಿ ಬಂಧಿಸಿದ ಅಮೆರಿಕ: ವಿಶ್ವ ಸಮುದಾಯ ಖಂಡನೆ

ವಾಯು ದಾಳಿ ನಡೆಸಿ ವೆನಿಜುವೆಲಾ ಅಧ್ಯಕ್ಷ, ಪತ್ನಿ ಬಂಧಿಸಿದ ಅಮೆರಿಕ: ವಿಶ್ವ ಸಮುದಾಯ ಖಂಡನೆ

ವೆನಿಜುವೆಲಾ ರಾಜಧಾನಿ ಕರಾಕಸ್ ಮೇಲೆ ಶುಕ್ರವಾರ ತಡರಾತ್ರಿ ಭಾರಿ ಪ್ರಮಾಣದಲ್ಲಿ ಅಮೆರಿಕ ಸೇನೆ ವಾಯು ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿದೆ. ವೆನಿಜುವೆಲಾ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಹಾಕಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಿಕೋಲಸ್ ಮಡೂರೊ ಅಂತರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣಿಕೆ ಜಾಲದ ಪ್ರಮುಖ ಸೂತ್ರಧಾರ ಎಂದು ಆರೋಪಿಸಿ ಅಮೆರಿಕದಿಂದ ಈ ದಾಳಿ ನಡೆಸಲಾಗಿದೆ. ಆರೋಪವನ್ನು ವೆನಿಜುವೆಲಾ ತಳ್ಳಿ ಹಾಕಿದೆ. ದೇಶದ ಭಾರಿ ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿರುವ ಅಮೆರಿಕ ಮಡೂರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಈ ರೀತಿ ಯತ್ನಿಸಿದೆ ಎಂದು ಟೀಕಿಸಿದೆ.

ವಿಶ್ವಸಮುದಾಯ ಅಮೆರಿಕ ನಡೆಯನ್ನು ಖಂಡಿಸಿದೆ. ಐರೋಪ್ಯ ಒಕ್ಕೂಟ ಘಟನೆಯನ್ನು ಖಂಡಿಸಿದ್ದು, ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಅಮೆರಿಕ ಗೌರವ ಕೊಡಬೇಕು. ವೆನಿಜುವೆಲಾದಲ್ಲಿ ಸಂಯಮ ಪಾಲಿಸಬೇಕು ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ, ನಾವು ಶತ್ರುಗಳಿಗೆ ಮಣಿಯುವುದಿಲ್ಲ. ದೇವರು ಬಯಸಿದ್ದಲ್ಲಿ ದೇವರ ಅನುಗ್ರಹವಿದ್ದರೆ ಶತ್ರುವನ್ನು ನಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾ ವಿದೇಶಾಂಗ ಸಚಿವಾಲಯ ಕೂಡ ಘಟನೆಯನ್ನು ಖಂಡಿಸಿದ್ದು, ವೆನಿಜುವೆಲಾದ ಅಧ್ಯಕ್ಷ ಮತ್ತು ಪತ್ನಿಯನ್ನು ಸೆರೆ ಹಿಡಿದು ಬಲವಂತವಾಗಿ ದೇಶದಿಂದ ಹೊರಗೆ ಹಾಕಿರುವುದು ರಾಷ್ಟ್ರದ ಸಾರ್ವಭೌಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ಕೊಲಂಪಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು. ವೆನಿಜುವೆಲಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು. ಅಮೆರಿಕ ನಡೆಸಿದ ಏಕಪಕ್ಷೀಯ ಮಿಲಿಟರಿ ಕ್ರಮವನ್ನು ವಿಶ್ವಸಂಸ್ಥೆ ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular