ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಪುನರ್ವಸತಿ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಲಾಗಿದೆ.
30 ವರ್ಷಗಳಿಂದ ಇಲ್ಲಿ ಮೂರು ಸಾವಿರ ಜನರು ವಾಸಿಸುತ್ತಿದ್ದಾರೆ. ಅವರಿಗೆ ಪುನರ್ವಸತಿ, ಪರಿಹಾರ ಕಲ್ಪಿಸಬೇಕೆಂದು
ಜೈಬಾ ತಬಸ್ಸುಮ್ ಮತ್ತು ಇತರರು ಪಿಐಎಲ್ ಸಲ್ಲಿಸಿದ್ದಾರೆ. ವಸೀಂ ಕಾಲೋನಿ, ಫಕೀರ್ ಕಾಲೋನಿಯಿಂದ ತೆರವುಗೊಳಿಸಿದ ನಿವಾಸಿಗಳಿಗೆ 5 ಕಿ.ಮೀ. ಅಂತರದೊಳಗೆ ವಸತಿ ಕಲ್ಪಿಸಬೇಕು. ಅಲ್ಲಿಯವರೆಗೆ 3 ಹೊತ್ತು ಪೌಷ್ಠಿಕ ಆಹಾರ ನೀಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡಂತೆ ಅರ್ಜಿ ಸಲ್ಲಿಸಲಾಗಿದೆ.

