ಬೆಂಗಳೂರು : ಹೊಸ ವರ್ಷದ ಮೊದಲ ದಿನವೇ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದೆ.ಮುಷ್ಕರ ನಡೆಸದಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹೌದು, ಪ್ರತಿಭಟನೆಗೆ ಸಜ್ಜಾಗಿದ್ದ ಸಾರಿಗೆ ನೌಕರರಿಗೆ ಸರ್ಕಾರ ‘ಎಸ್ಮಾ’ ಅಸ್ತ್ರ ಪ್ರಯೋಗಿಸಿ ಭಾರಿ ಶಾಕ್ ನೀಡಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 6 ತಿಂಗಳವರೆಗೆ ಯಾವುದೇ ಮುಷ್ಕರ ನಡೆಸದಂತೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
2026 ರ ಜನವರಿ 1 ರಿಂದ ಮುಂದಿನ 6 ತಿಂಗಳವರೆಗೆ ಮುಷ್ಕರ ನಡೆಸದಂತೆ ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮುನ್ನ ನೀಡಿದ್ದ ಅಧಿಸೂಚನೆ 2025 ರ ಡಿ.31 ಕ್ಕೆ ಕೊನೆಯಾದ ಹಿನ್ನೆಲೆ ಈಗ ಮುಷ್ಕರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಎಸ್ಮಾ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದರು.

