HomeLatest NewsBIG NEWS: ಚೆಕ್ ಬೌನ್ಸ್ ಕೇಸ್: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR ದಾಖಲು

BIG NEWS: ಚೆಕ್ ಬೌನ್ಸ್ ಕೇಸ್: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR ದಾಖಲು

ಬೀದರ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಸಕ ಶಸರು ಸಲಗರ ವಿರುದ್ಧ ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸಭಾ ಚುನಾವಣೆ ವೇಳೆ ಶರಣು ಸಲಗರ, ಉದ್ಯಮಿ ಸಂಜೀವ್ ಕುಮಾರ್ ಸುಗುರೆ ಅವರಿಂದ 99 ಲಕ್ಷ ರೂಪಾಯಿ ಹಣ ಪಡೆದಿದ್ದರು. ಹಣ ಪಡೆದ ವೇಳೆ ಶಾಸಕರು ಭದ್ರತೆಗಾಗಿ ತನ್ನ ಬಳಿ ಇದ್ದ ಖಾಲಿ ಚೆಕ್ ನೀಡಿದ್ದರು. ನಿಗದಿತ ಅವಧಿಯಲ್ಲಿ ಶರಣು ಸಲಗರ ಹಣ ವಾಪಸ್ ಕೊಟ್ಟಿಲ್ಲ. ಇದರಿಂದ ಉದ್ಯಮಿ ಚೆಕ್ ನ್ನು ಬ್ಯಾಂಕ್ ಗೆ ಸಲ್ಲಿಸಿದ್ದಾರೆ. ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ.

ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಉದ್ಯಮಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಬಸವ ಕಲ್ಯಾಣ ಠಾಣೆಯಲ್ಲು ದೂರು ನೀಡಿದ್ದಾರೆ. ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular