ವಿಜಯನಗರ: ಅನ್ವೇಷಣೆಗೆಂದು ಫ್ರಾನ್ಸ್ ನಿಂದ ಹಂಪಿಗೆ ಆಗಮಿಸಿದ್ದ ವಿದೇಶಿ ಪ್ರವಾಸಿಗನೊಬ್ಬ ಬೆಟ್ಟ ಏರುವಾಗ ಜಾರಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದು, ಎರಡು ದಿನಗಳ ಬಳಿಕ ಅವರನ್ನು ರಕ್ಷಿಸಿರುವ ಘಟನೆ ನಡೆದಿದೆ.
ಹಂಪಿಯ ಐತಿಹಾಸಿಕ ಅಷ್ಟಭುಜ ಸ್ನಾಅನಘಟ್ಟದ ಬಳಿ ಪ್ರವಾಸಿಗ ಜಾರಿ ಬಿದ್ದಿದ್ದಾರೆ. ಎರಡು ದಿನಗಳ ಬಳಿಕ ಅವರನ್ನು ರಕ್ಷಿಸಲಾಗಿದೆ. ಗಂಭೀರವಗೈ ಗಾಯಗೊಂಡಿರುವ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಅಖಲಿಸಲಾಗಿದೆ. ಬ್ರುನೋ ರೋಜರ್ ಗಾಯಾಳು ಪ್ರವಾಸಿಗ.
ಫ್ರಾನ್ಸ್ ನಿಂದ ಏಕಾಂಗಿಯಾಗಿ ಆಗಮಿಸಿದ್ದ ಬ್ರುನೋ ರೋಜರ್, ಹಂಪಿಯ ಕಡ್ಡಿರಾಂಪುರದಲ್ಲಿ ಹೋಂ ಸ್ಟೇನಲ್ಲಿ ತಂಗಿದ್ದರು. ಅನ್ವೇಷಣೆಗೆಂದು ಬೆಟ್ಟ ಏರುವಾಗ ಕಾಲು ಜಾರಿ ಬಿದ್ದಿದ್ದಾರೆ. ಸಂಜೆಯ ವೇಳೆ ಈ ಘಟನೆ ನಡೆದಿದೆ. ಅಲ್ಲದೇ ಆಭಾಗದಲ್ಲಿ ಹೆಚ್ಚಿನ ಜನ ಸಂಚಾರ ಕೂಡ ಇರುವುದಿಲ್ಲವಾದ್ದರಿಂದ ಬ್ರುನೋ ಯಾರ ಕಣ್ಣಿಗೂ ಕಂಡುಬಂದಿಲ್ಲ. ಎರಡು ದಿನಗಳ ಕಾಲ ಸ್ಥಳದಲ್ಲೇ ಪರದಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬ್ರೂನೋ ಜೀವ ಉಳಿಸಿಕೊಳ್ಳಲು ತೆವಳುತ್ತಾ ಸ್ಥಳೀಯರ ಬಾಳೆ ತೋಟ ಪ್ರವೇಶಿಸಿದ್ದಾರೆ . ಅವರನ್ನು ಕಂಡು ರೈತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿ ಪೊಲೀಸರು, ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

