HomeIndiaಅಧಿಕಾರಿಗಳ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡಿದ ಕಾಂಗ್ರೆಸ್ ಶಾಸಕ!

ಅಧಿಕಾರಿಗಳ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡಿದ ಕಾಂಗ್ರೆಸ್ ಶಾಸಕ!

ಅಧಿಕಾರಿಗಳ ಮನೆಯ ವಿದ್ಯುತ್ ಸಂಪರ್ಕವನ್ನು ಕಾಂಗ್ರೆಸ್ ಶಾಸಕ ವಿದ್ಯುತ್ ಕಂಬ ಕತ್ತಿ ಕಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ನಿವಾಸ ಇರುವ ಪ್ರದೇಶದಲ್ಲಿ ವಿದ್ಯುತ್ ಕಡಿತದಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ವೀರೇಂದ್ರ ಜಟ್ಟಿ ಅಧಿಕಾರಿಗಳ ಮನೆ ಸಂಪರ್ಕ ಕಡಿತಗೊಳಿಸಿ, ಸುದ್ದಿಯಲ್ಲಿದ್ದಾರೆ.

ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ಹರಿದ್ವಾರ ಜಿಲ್ಲೆಯ ಝಬ್ರೇಡಾ ಕ್ಷೇತ್ರದ ಕಾಂಗ್ರೆಸ್ ನಾಯಕ ವೀರೇಂದ್ರ ಜಟ್ಟಿ. ತಮ್ಮ ಕ್ಷೇತ್ರದಲ್ಲಿ ದಿನಕ್ಕೆ 5-6  ಗಂಟೆಗಳ ಕಾಲ ಅಘೋಷಿತ ವಿದ್ಯುತ್ ಕಡಿತವಾಗುತ್ತಿರುವುದನ್ನು ಖಂಡಿಸಿ, ಅವರು ವಿದ್ಯುತ್ ಕಂಬ ಏರಿ ಮೂವರು ಇಲಾಖಾ ಅಧಿಕಾರಿಗಳ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿನೂತನ ಪ್ರತಿಭಟನೆ: ಶಾಸಕ ವೀರೇಂದ್ರ ಜಟ್ಟಿ ಪ್ರಕಾರ ಇದು ವಿನೂತನ ಪ್ರತಿಭಟನೆ. ಶಾಸಕರು ಬೆಂಬಲಿಗರ ಜೊತೆ ಏಣಿ ಮತ್ತು ವಿದ್ಯುತ್ ಲೈನ್ ಕತ್ತರಿಸುವ ಉಪಕರಣದ ಜೊತೆ ಬಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು ಅಧೀಕ್ಷಕ ಇಂಜಿನಿಯರ್ ವಿವೇಕ್ ರಜಪೂತ್ ಅವರ ನಿವಾಸದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ಮುಖ್ಯ ಇಂಜಿನಿಯರ್ ಅನುಪಮ್ ಸಿಂಗ್ ಮತ್ತು ಕಾರ್ಯಪಾಲಕ ಇಂಜಿನಿಯರ್ ವಿನೋದ್ ಪಾಂಡೆ ಅವರ ಮನೆಗಳ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡಿದರು. ಇದನ್ನು ಅವರ ಬೆಂಬಲಿಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಶಾಸಕ ವೀರೇಂದ್ರ ಜಟ್ಟಿ ಮಾತನಾಡಿ, “ಕಳೆದ 10 ದಿನಗಳಿಂದ ವಿದ್ಯುತ್ ಸಮಸ್ಯೆಯ ಬಗ್ಗೆ ಇಲಾಖೆಯ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಒಂದು ಗಂಟೆ ವಿದ್ಯುತ್ ಇಲ್ಲದಿದ್ದರೆ ಅಧಿಕಾರಿಗಳ ಸ್ಥಿತಿ ಹೀಗಾಗುತ್ತದೆ, ಇನ್ನು ದಿನವಿಡೀ ವಿದ್ಯುತ್ ಇಲ್ಲದೆ ಜನರು ಮತ್ತು ವ್ಯಾಪಾರಿಗಳು ಅನುಭವಿಸುವ ಕಷ್ಟ ಹೇಗಿರುತ್ತದೆ?” ಎಂದು ಪ್ರಶ್ನಿಸಿದರು.

ಶಾಸಕ ವೀರೇಂದ್ರ ಜಟ್ಟಿ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದ್ಯುತ್ ಇಲಾಖೆಯು ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ದೂರು ದಾಖಲಿಸಿದೆ. ಆದರೆ ಶಾಸಕ ವೀರೇಂದ್ರ ಜಟ್ಟಿ ಕೆಲಸ ಇಡೀ ದೇಶಾದ್ಯಂತ ಸುದ್ದಿ ಮಾಡಿದೆ.

ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ವಿದ್ಯುತ್ ತಂತಿ ಮುಟ್ಟುವುದು ಅಪಘಾತಕ್ಕೆ ಕಾರಣವಾಗುತ್ತದೆ. ಇದು ಇಲಾಖೆಯ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ ಸರ್ಕಾರಿ ಕೆಲಸದಲ್ಲಿ ಶಾಸಕರ ನೇರ ಹಸ್ತಕ್ಷೇಪವಾಗಿದೆ ಎಂದು ಇಲಾಖೆ ಹೇಳಿದೆ.

ಇಲಾಖೆಯ ದೂರಿನ ಬಳಿಕವೂ ಶಾಸಕ ವೀರೇಂದ್ರ ಜಟ್ಟಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸರ್ಕಾರಿ ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ದಿನವಿಡೀ ವಿದ್ಯುತ್ ಇಲ್ಲ ಎಂದರೆ ಜನರು ಎಷ್ಟು ಕಷ್ಟ ಅನುಭವಿಸುತ್ತಾರೆ ಎಂಬುದು ಅಧಿಕಾರಿಗಳಿಗೂ ತಿಳಿಯಬೇಕು ಎಂದು ಹೇಳಿದ್ದಾರೆ.

ಶಾಸಕರು ಅಧೀಕ್ಷಕ ಇಂಜಿನಿಯರ್ ವಿವೇಕ್ ರಜಪೂತ್ ನಿವಾಸದ ವಿದ್ಯುತ್ ಸಂಪರ್ಕ ಕಟ್ ಮಾಡಲು ಏಣಿ ಇಟ್ಟುಕೊಂಡು ವಿದ್ಯುತ್ ಕಂಬ ಏರುವುದು ಸೇರಿದಂತೆ ವಿವಿಧ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶಾಸಕರ ಕಾರ್ಯದ ಕುರಿತು ಚರ್ಚೆಗಳು ಸಹ ನಡೆಯುತ್ತಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular