HomeLatest NewsGOOD NEWS : ರಾಜ್ಯದ 1-10 ನೇ ತರಗತಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ :...

GOOD NEWS : ರಾಜ್ಯದ 1-10 ನೇ ತರಗತಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ‘ಉಚಿತ ಸಮವಸ್ತ್ರ’ ವಿತರಣೆಗೆ ಸರ್ಕಾರ ಆದೇಶ.!

ಬೆಂಗಳೂರು : ರಾಜ್ಯದ 1-10 ನೇ ತರಗತಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎಂಬಂತೆ ಉಚಿತ ಸಮವಸ್ತ್ರ ವಿತರಣೆಗೆ ಸರ್ಕಾರ ಆದೇಶ ಹೊರಡಿಸಿ ಅನುದಾನ ಬಿಡುಗಡೆ ಮಾಡಿದೆ.

2025-26ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾವಿಕಾಸ ಯೋಜನೆಯ 01 ನೇ ಜೊತೆ ಸಮವಸ್ತ್ರಕ್ಕೆ ರೂ.84.73 ಕೋಟಿ ಅನುದಾನ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಇಲಾಖೆಯ ಕೋರಿಕೆಯಂತೆ, 2025-26 ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ, ಬಟ್ಟೆ ಸರಬರಾಜು ಮಾಡಿದ ಕೆ.ಹೆಚ್.ಡಿ.ಸಿ ಹಾಗೂ ಇ-ಟೆಂಡರ್ ಅರ್ಹತೆ ಪಡೆದು ಸರಬರಾಜು ಮಾಡಿರುವ ಸಂಸ್ಥೆಗಳಿಗೆ ಒಟ್ಟು ರೂ.83.07 ಕೋಟಿ (ಎಂಬತ್ತೂರು ಕೋಟಿ ಏಳು ಲಕ್ಷಗಳು) ಅನುದಾನವನ್ನು ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಲಭ್ಯವಿರುವ ಅನುದಾನದಿಂದ ಬಿಡುಗಡೆ ಮಾಡಿ ನಿಯಮಾನುಸಾರ ಭರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅನುಮತಿ ನೀಡಿ ಆದೇಶಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಸರಬರಾಜು ಕಾರ್ಯ ಸಂಪೂರ್ಣಗೊಂಡ ನಂತರ ಕಡ್ಡಾಯವಾಗಿ ಗುಣಮಟ್ಟ ಪರಿಶೀಲನೆ ನಡೆಸತಕ್ಕದ್ದು.
ಅಂತಿಮ ಗುಣಮಟ್ಟ ಪರಿಶೀಲನೆಯಲ್ಲಿ ಅರ್ಹಗೊಂಡ ಸರಬರಾಜುದಾರರಿಗೆ ಮಾತ್ರ ಅರ್ಹತೆಯಂತೆ ನಿಯಮಾನುಸಾರ ಅನುದಾನ ಬಿಡುಗಡೆಗೊಳಿಸಲು ಅಗತ್ಯ ಕ್ರಮವಹಿಸತಕ್ಕದ್ದು.ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಇವರು ಈ ಸರ್ಕಾರದ ಆದೇಶ, ಮತ್ತು ಯೋಜನ ಅನುಷ್ಠಾನದ ಸಂಬಂಧ ಅನುದಾನ ಪಾವತಿಯ ವಿವರಗಳನ್ನು ಇಲಾಖಾ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ಅಳವಡಿಸತಕ್ಕದ್ದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡುಗಡೆ ಮಾಡಲಾಗಿರುವ ಅನುದಾನದ ಬಳಕೆಯ ಬಗ್ಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ಇವರು ಸೂಕ್ತ ಲೆಕ್ಕ ಪತ್ರಗಳನ್ನು ಇಡತಕ್ಕದ್ದು.ಸದರಿ ಯೋಜನೆಯ ಶೀಘ್ರು ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸತಕ್ಕದ್ದು ಹಾಗೂ ಅದರನ್ವಯ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆ ಹೊಸ ಡಿಸಿಷನ್ ಸಪೋರ್ಟ್ ಸಿಸ್ಟಂ (ಅವಲೋಕನ ತಂತ್ರಾಂಶದಲ್ಲಿ ಕಡ್ಡಾಯವಾಗಿ ಇಂದೀಕರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 628 ವೆಚ್ಚ-8/2023, ದಿನಾಂಕ:08.12.2025 ರಲ್ಲಿ ನೀಡಿರುವ ಸಹಮತದನ್ವಯ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆಇ 03 ಟಿ.ಎಫ್.ಪಿ 2025 ದಿನಾಂಕ:24.09.2025 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular