ಅಮರಾವತಿ: ಸಮರ್ಪಕ ತರಬೇತಿ ಪಡೆದುಕೊಂಡ ಸ್ನಾತಕೋತ್ತರ ಪದವಿ ಪೂರೈಸಿದ ಆಯುರ್ವೇದ ವೈದ್ಯರಿಗೆ ಸ್ವತಂತ್ರವಾಗಿ ಆಯ್ದ ಕೆಲವು ಶಸ್ತ್ರಚಿಕಿತ್ಸೆ ಕೈಗೊಳ್ಳಲು ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿದೆ.
ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಆಧುನಿಕ ವೈದ್ಯಕೀಯ ಪದ್ಧತಿಯೊಂದಿಗೆ ಸಂಯೋಜಿಸಲು ಆಂಧ್ರಪ್ರದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಭಾರತೀಯ ವೈದ್ಯಕೀಯ ಮಂಡಳಿ 2020 ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಗಳ ರಾಷ್ಟ್ರೀಯ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಯುರ್ವೇದ ವೈದ್ಯರು ಆಯ್ದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಒಪ್ಪಿಗೆ ನೀಡಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಅರ್ಹ ಆಯುರ್ವೇದ ವೈದ್ಯರು ಶೇಕಡ 39 ರಷ್ಟು ಸಾಮಾನ್ಯ ಶಸ್ತ್ರಚಿಕಿತ್ಸೆ, ಶೇಕಡ 19 ರಷ್ಟು ಕಿವಿ, ಮೂಗು, ಗಂಟಲು, ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆ ನೀಡಬಹುದಾಗಿದೆ ಎಂದು ಹೇಳಲಾಗಿದೆ.

