HomeLatest NewsBREAKING: ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೆಟ್ರೋ ಸಂಪರ್ಕ ಬಲಪಡಿಸಲು BMRCL–BMTC ಹೊಸ ಫೀಡರ್ ಬಸ್ ಸೇವೆ...

BREAKING: ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೆಟ್ರೋ ಸಂಪರ್ಕ ಬಲಪಡಿಸಲು BMRCL–BMTC ಹೊಸ ಫೀಡರ್ ಬಸ್ ಸೇವೆ ಆರಂಭ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಪರಸ್ಪರ ಸಹಕಾರದೊಂದಿಗೆ ಮೆಟ್ರೋ ಪ್ರಯಾಣಿಕರಿಗೆ ಸುಗಮ ಮತ್ತು ಪರಿಣಾಮಕಾರಿ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿವೆ. ಈ ಸೇವೆಗಳು ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿವೆ.

ಬಿಎಂಟಿಸಿ ವತಿಯಿಂದ ಆರಂಭಿಸಲಾದ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರಗಳು ಈ ಕೆಳಗಿನಂತಿವೆ:

1. ಜ್ಞಾನಭಾರತಿ ಮೆಟ್ರೋ ನಿಲ್ದಾಣ ಭಾರತ್‌ ನಗರ 2ನೇ ಹಂತ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಗ: ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮುದ್ದೆಯನಪಾಳ್ಯ ಜಂಕ್ಷನ್, ಭಾರತನಗರ 1ನೇ ಹಂತ, ಬ್ಯಾಡರಹಳ್ಳಿ ಮೂಲಕ

ಜ್ಞಾನಭಾರತಿ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: 06:25, 07:40, 08:50, 10.30, 14:05, 15.05, 16.20, 18.10, 19.35, 20.55

ಭಾರತ್‌ನಗರ 2ನೇ ಹಂತದಿಂದ ಹೊರಡುವ ಸಮಯ: 05:50, 07:00, 08.15, 09.30 11.10 14.30 15.40, 17.15, 18.50, 20.15

2. ಕೆ.ಆರ್. ಪುರ ಮೆಟ್ರೋ ನಿಲ್ದಾಣ – ಸರ್ಜಾಪುರ

ಮಾರ್ಗ: ಮಹಾದೇವಪುರ ಜಂಕ್ಷನ್, ದೊಡ್ಡನೆಕ್ಕುಂದಿ ರೈಲು ನಿಲ್ದಾಣ, ಮಾರತ್ತಹಳ್ಳಿ ಸೇತುವೆ ಜಂಕ್ಷನ್, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ ದೊಡ್ಡಕನ್ನಳ್ಳಿ, ಕೊಡತಿ ಗೇಟ್. ಮುತ್ತನಲ್ಲೂರು ಕ್ರಾಸ್, ದೊಮ್ಮಸಂದ್ರ ಯಮರೆ ಸೋಂಪುರ ಗೇಟ್

ಕೆ.ಆರ್. ಪುರ ಮೆಟ್ರೋ ನಿಲ್ದಾಣದಿಂದ ಹೊರಡುವ ಸಮಯ: 05.30, 06.50, 08:00, 08:40, 09:25, 10.10, 11.20, 11.35, 13.15, 14.45, 15.25, 16:05, 16.50, 17.45, 19.10, 20.40

ಸರ್ಜಾಪುರದಿಂದ ಹೊರಡುವ ಸಮಯ: : 05.30, 06.50, 07.55, 08.40, 09.30, 10.10, 11.20, 13.40, 14.25, 15.10, 16.00, 16.40, 17.40, 19.10, 20.40

3. ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) – ಬಿದರಹಳ್ಳಿ

ಮಾರ್ಗ: ಟಿ.ಟಿ.ಸಿ ಪಾಳ್ಯ, ಕ್ರಾಸ್, ಕಿತ್ತಗನೂರು, ಈಸ್ಟ್ ಪಾಯಿಂಟ್ ಕಾಲೇಜ್ ಬ್ಯಾಕ್ ಗೇಟ್

ಟಿನ್ ಫ್ಯಾಕ್ಟರಿಯಿಂದ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಹೊರಡುವ ಸಮಯ: 08.50, 10.50, 12.25, 14.00, 16.00, 17.35

ಬಿದರಹಳ್ಳಿಯಿಂದ ಹೊರಡುವ ಸಮಯ: 08.00, 10.00, 11.35, 13.10, 15.15, 16.45

ಮೆಟ್ರೋ ಪ್ರಯಾಣಿಕರು ಈ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಉಪಯೋಗಿಸಿ ಸುಲಭ, ಸುರಕ್ಷಿತ ಹಾಗೂ ಸಮಯಬದ್ಧ ಪ್ರಯಾಣ ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular