ಉಡುಪಿ: ಪಾಕಿಸ್ತಾನಕ್ಕೆ ಭಾರತದ ನೌಕಾಪಡೆಯ ರಹಸ್ಯ ಮಾಹಿತಿ ರವಾನಿಸುತ್ತಿದ ಮತ್ತೋರ್ವ ಆರೋಪಿಯನ್ನು ಉಡುಪಿ ಜಿಲೆಯ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಆನಂದ ತಾಲೂಕಿನ ಕೈಲಾಸ್ ನಗರಿಯ ಹಿರೇಂದ್ರ (34) ಬಂಧಿತ ಆರೋಪಿ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಪಾಕಿಸ್ತಾನಕ್ಕೆ ಭಾರತದ ನೌಕಾ ನೆಲೆಯ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈ ಹಿಂದೆ ನವೆಂಬರ್ ೨೧ರಂದು ಬಂಧಿಸಲಾಗಿತ್ತು. ರೋಹಿತ್ ಹಾಗೂ ಸಂತ್ರಿ ಎಂಬ ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಇನ್ನೋರ್ವ ಆರೋಪಿ ಹಿರೇಂದ್ರನನ್ನು ಬಂಧಿಸಲಾಗಿದೆ. ಮೂವರೂ ಮಲ್ಪೆಯ ಕೊಚ್ಚಿನ ಯಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು.
ಹಿರೇಂದ್ರ ರೋಹಿತ್ ಹಾಗೂ ಸಂತ್ರಿಯಿಂದ ಹಣ ಪಡೆದು ನೌಕಾ ನೆಲೆಯ ಮಾಹಿತಿಗಳನ್ನು ನೀಡುತ್ತಿದ್ದ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.

