HomeLatest News ವಾಹನ ತಡೆದು 44 ಕ್ವಿಂಟಲ್ ಅಡಿಕೆ ದರೋಡೆ: ಮಾಲು ಸಮೇತ ನಾಲ್ವರು ಅರೆಸ್ಟ್

 ವಾಹನ ತಡೆದು 44 ಕ್ವಿಂಟಲ್ ಅಡಿಕೆ ದರೋಡೆ: ಮಾಲು ಸಮೇತ ನಾಲ್ವರು ಅರೆಸ್ಟ್

ಚಿಕ್ಕಮಗಳೂರು: ಅಡಿಕೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 2.56 ಲಕ್ಷ ರೂಪಾಯಿ ಮೌಲ್ಯದ ಹಸಿ ಅಡಕೆ ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ನರಸಿಂಹರಾಜಪುರ ಠಾಣೆ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪ್ ನ ನಿವಾಸಿ ವೀರೇಶ, ಮಹೇಶ, ಎಂ. ಕಾರ್ತಿಕ್ ಮತ್ತು ಆರ್. ಶ್ರೀಹರಿ ಬಂಧಿತ ಆರೋಪಿಗಳು. ಬಾಳೆಹೊನ್ನೂರು -ನರಸಿಂಹರಾಜಪುರ ಮಾರ್ಗಮದ್ದೆ ಬರುವ ಅಳೆಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 12ರಂದು ಪಿಕಪ್ ವಾಹನ ಅಡ್ಡಗಟ್ಟಿದ ಆರೋಪಿಗಳು ವಾಹನದ ಮಾಲೀಕ ಕೆ. ರವಿ ಹಾಗೂ ಚಾಲಕ ವಿಶ್ವಾಸ್ ಅವರ ಮೇಲೆ ಹಲ್ಲೆ ನಡೆಸಿ 44 ಕ್ವಿಂಟಲ್ ಹಸಿ ಅಡಿಕೆ, 29,000 ರೂ. ನಗದು, ಎರಡು ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡ ನರಸಿಂಹರಾಜಪುರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ್ದ 2.56 ಲಕ್ಷ ರೂಪಾಯಿ ಮೌಲ್ಯದ ಅಡಕೆ, ಮೂರು ಲಕ್ಷ ರೂಪಾಯಿ ಮೌಲ್ಯದ ಬೊಲೆರೋ ವಾಹನ, 15,000 ರೂ. ಮೊತ್ತದ ಬೈಕ್ ಸೇರಿದಂತೆ 5.71 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್ಪಿ ವಿಕ್ರಂ ಆಮಟೆ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗುರುದತ್ ಕಾಮತ್, ಸಬ್ ಇನ್ಸ್ಪೆಕ್ಟರ್ ಬಿ.ಎಸ್. ನಿರಂಜನ್ ಗೌಡ, ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಎನ್.ಎ. ಜ್ಯೋತಿ, ಸಿಬ್ಬಂದಿ ಮಧು, ಎಸ್‌.ಜಿ. ಸೋಮೇಶ, ಪಿ.ಎ. ಬಿನು, ಯುಗಾಂಧರ, ಅಮಿತ್ ಚೌಗಲೆ, ದೇವರಾಜ, ರೇವಗೊಂಡ ಆರಾಧರ, ಎಂ.ಸಿ. ಮನು, ಮುರುಗೇಶ್, ಚಂದ್ರಕಾಂತ್ ಪೂಜಾರಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು,

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular