HomeLatest Newsಅಪಘಾತದಲ್ಲಿ ಗಾಯಾಳುಗಳ ರಕ್ಷಣೆ ಮಾಡಿ ಜೀವ ಉಳಿಸಿದವರಿಗೆ 25 ಸಾವಿರ ರೂ., 'ಹೆದ್ದಾರಿ ವೀರ' ಗೌರವ:...

ಅಪಘಾತದಲ್ಲಿ ಗಾಯಾಳುಗಳ ರಕ್ಷಣೆ ಮಾಡಿ ಜೀವ ಉಳಿಸಿದವರಿಗೆ 25 ಸಾವಿರ ರೂ., ‘ಹೆದ್ದಾರಿ ವೀರ’ ಗೌರವ: ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಮೂಲಕ ಕಾಳಜಿ ತೋರುವವರಿಗೆ ಬೆಂಬಲಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಂಡಿದೆ.

ಕಾನೂನು ಕಿರಿಕಿರಿಯ ಭೀತಿ ಇಲ್ಲದೆ ಜೀವ ರಕ್ಷಣೆ ಮಾಡುವವರನ್ನು ಹೆದ್ದಾರಿ ವೀರ(ರಹವೀರ್) ಎಂದು ಗುರುತಿಸಿ 25,000 ರೂ. ಬಹುಮಾನ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.

ಚಳಿಗಾಲದಲ್ಲಿ ರಸ್ತೆ ಅಪಘಾತಗಳು, ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳು ಗಾಯಾಳುಗಳನ್ನು ರಕ್ಷಿಸಿ ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದರೆ ಅಮೂಲ್ಯ ಜೀವ ಉಳಿಯುತ್ತದೆ. ಅಂತಹ ತುರ್ತು ಸಹಾಯ ನೀಡುವವರನ್ನು ಗೌರವದಿಂದ ಕಾಣಲು ಸರ್ಕಾರ ನಿರ್ಧರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುರ್ತು ಚಿಕಿತ್ಸೆ ಸಿಗದೇ ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತದೆ. ಇಂತಹ ನಿರ್ಲಕ್ಷ್ಯದಿಂದ ವರ್ಷಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಿಕವಾಗಿ ಸಹಾಯ ದೊರೆತರೆ 50 ಸಾವಿರಕ್ಕೂ ಹೆಚ್ಚು ಜನರ ಜೀವ ಉಳಿಸಬಹುದಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಿತಿನ್ ಗಡ್ಕರಿ, ಅಪಘಾತದ ಸಂದರ್ಭದಲ್ಲಿ ಸಾಮೂಹಿಕ ಜವಾಬ್ದಾರಿ ತೆಗೆದುಕೊಳ್ಳುವುದು ಮುಖ್ಯ. ತುರ್ತು ನೆರವು ನೀಡುವವರಿಗೆ ಪೊಲೀಸರು ಕಿರಿಕಿರಿ ಉಂಟು ಮಾಡಬಾರದು. ಆಸ್ಪತ್ರೆಗಳು ಗಾಯಾಳುಗಳ ಬಗ್ಗೆ ತುರ್ತು ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಗಾಯಾಳು ಬಡವನೇ, ಶ್ರೀಮಂತನೇ ಎಂದು ನೋಡುವ ಬದಲು ತುರ್ತು ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದಾರೆ.

7 ದಿನ ಮೇಲ್ಪಟ್ಟು ಗಾಯಾಳು ಇರಿಸಿಕೊಂಡು ಚಿಕಿತ್ಸೆ ನೀಡಿ ಜೀವ ಉಳಿಸುವ ಆಸ್ಪತ್ರೆಗೆ ಸರ್ಕಾರ 1.5 ಲಕ್ಷ ರೂ.  ನೀಡಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular