ರಾಯಚೂರು : ರಾಯಚೂರಿನಲ್ಲಿ ಹಾಡಹಗಲೇ ‘ಡ್ರೈ ಫ್ರೂಟ್ಸ್’ ವ್ಯಾಪಾರಿಯನ್ನ ಅಟ್ಟಾಡಿಸಿ ಹತ್ಯೆ ಮಾಡಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಆಂಧ್ರಪ್ರದೇಶದ ಕಡಪ ಮೂಲದ ಇಮಾಮ್ ಹುಸೇನ್ (24) ಎಂಬುವವರನ್ನ ದುಷ್ಕರ್ಮಿಗಳು ಅಟ್ಟಾಡಿಸಿ ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ.
ರಾಯಚೂರಿನಲ್ಲಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಇಮಾನ್ ಹುಸೇನ್ ಜೀವನ ಸಾಗಿಸುತ್ತಿದ್ದರು.ಅಲ್ಲಿಗೆ ಬಂದ ನಾಲ್ವರು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಹಣ ನೀಡಲ್ಲ ಎಂದಿದ್ದಕ್ಕೆ ಇಮಾಮ್ ಹುಸೇನ್ ನನ್ನ ಅಟ್ಟಾಡಿಸಿ ಕಲ್ಲಿನಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

